ಚೆನ್ನೈ:ಅಮ್ಮನಿಗೆ ಮಕ್ಕಳು ಏನು ಕೊಟ್ಟರೂ ಖುಷಿನೇ. ಅದೇ ರೀತಿ ಇಲ್ಲೊಬ್ಬ ಪುತ್ರ ತನ್ನ ಅಮ್ಮನಿಗೆ ಸರ್ಪ್ರೈಜ್ ಆಗಿಯೇ ಮೊಬೈಲ್ ಗಿಫ್ಟ್ ಕೊಟ್ಟಿದ್ದಾರೆ. ಆಗ ಅಮ್ಮ ಕೊಟ್ಟ ರಿಯಾಕ್ಷನ್ ಇದೆ ನೋಡಿ. ಅದು ನಿಜಕ್ಕೂ ಅಮೂಲ್ಯವಾಗಿಯೇ ಇದೆ. ಆ ಕ್ಷಣದ ಅದೇ ವೀಡಿಯೋ ಈಗ ವೈರಲ್ ಆಗಿದೆ.
ವೀಘ್ನೇಶ್ ಅನ್ನೋರು ಈ ವೀಡಿಯೋವನ್ನ ಶೇರ್ ಮಾಡಿದ್ದಾರೆ. ಅಮ್ಮನಿಗೆ ನಾನು ಕೊಟ್ಟದ್ದು ಕೇವಲ 8,800 ರೂಪಾಯಿ ಮೊಬೈಲ್ ಅದಾಗಿದೆ. ಆದರೆ ಅಮ್ಮ ಆ ಕ್ಷಣ ಪಟ್ಟ ಖುಷಿ ಎಲ್ಲದಕ್ಕೂ ಮೀರಿದ್ದು. ಅದಕ್ಕೆ ಸಾಟಿನೇ ಇಲ್ಲ ಅಂತಲೇ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಅಂದ್ರೆ ಈ ಮೊಬೈಲ್ ಪಡೆದ ಅಮ್ಮನ ಈ ವೀಡಿಯೋವನ್ನ ತಮಿಳು ನಾಯಕ ನಟ ಆರ್.ಮಾಧವನ್ ಕೂಡ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದಾರೆ.
PublicNext
08/01/2022 03:43 pm