ಲಕ್ನೋ: ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅವರ ಅಂತ್ಯಕ್ರಿಯೆ ಉತ್ತರ ಪ್ರದೇಶದ ಆಗ್ರಾದಲ್ಲಿ ಇಂದು ನೆರವೇರಿತು.
ತಾಜಗಂಜ್ ಮೋಕ್ಷಧಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಎಂಟು ವರ್ಷದ ಮುಗ್ಧ ಮಗ ಮತ್ತು 12 ವರ್ಷದ ಮಗಳು ಹುತಾತ್ಮ ಯೋಧ, ತಂದೆ ಪೃಥ್ವಿ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಬೆಂಕಿ ಇಟ್ಟಾಗ, ಎಲ್ಲರ ಕಣ್ಣುಗಳಲ್ಲಿ ನೀರು ತುಂಬಿತ್ತು. ಇದಕ್ಕೂ ಮುನ್ನ ನಡೆದ ಹೃದಯಸ್ಪರ್ಶಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಅಂತ್ಯಕ್ರಿಯೆಗೂ ತಂದೆಗೆ ಪುತ್ರ ಸೆಲ್ಯೂಟ್ ಹೊಡೆದನು. ಬಳಿಕ ತಂದೆಯ ಪಾರ್ಥಿವ ಶರೀರದ ಮೇಲಿದ್ದ IAF ಕ್ಯಾಪ್ ತೆಗೆದುಕೊಂಡು ಧರಿಸಿ ಮತ್ತೊಮ್ಮೆ ಸೆಲ್ಯೂಟ್ ಹೊಡೆದ ದೃಶ್ಯದ ವಿಡಿಯೋ ವೈರಲ್ ಆಗಿದೆ. ಪುಟ್ಟ ಬಾಲಕ ತನ್ನ ತಂದೆಯ ವೀರ ಮರಣಕ್ಕೆ ಅರ್ಪಿಸಿದ ಗೌರವ, ತಂದೆಯಂತೆ ದೇಶ ಸೇವೆ ಮಾಡುವ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
11/12/2021 09:27 pm