ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಿಗಳ ರಕ್ಷಿಣೆಗಾಗಿ ಕೊಳಕು ಮಂಡಲ ಹಾವು ಕಚ್ಚಿ ಜೀವಬಿಟ್ಟ ಶ್ವಾನ

ತುಮಕೂರು: ಶ್ವಾನವೊಂದು ತನ್ನ ಮರಿಗಳ ರಕ್ಷಣೆಗಾಗಿ ಕೊಳಕು ಮಂಡಲ ಹಾವನ್ನ ಕಚ್ಚಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ತುಮಕೂರಿನ ಅಗ್ರಹಾರದ ಬಳಿ ನಡೆದಿದೆ.

ಶ್ವಾನವು ಹುಲ್ಲಿನ ಬಣವೆ ಬಳಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಸ್ವಲ್ಪ ದಿನಗಳ ಬಳಿಕ ಇಲ್ಲಿ ಕೊಳಕು ಮಂಡಲ ಹಾವು ಪ್ರತ್ಯಕ್ಷವಾಗಿತ್ತು. ನಾಯಿ ಮರಿಗಳನ್ನು ತಿನ್ನಲು ಹಾವು ಬಂದಿದ್ದು, ನಾಯಿಯು ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ತೀವ್ರ ಪ್ರತಿರೋಧವೊಡ್ಡಿದೆ. ಅದರಂತೆ ತನ್ನ ಮರಿಗಳನ್ನ ರಕ್ಷಿಸಿಕೊಂಡಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ವಾರಂಗಲ್ ವನ್ಯ ಜೀವಿ ಸಂಸ್ಥೆಯ ದಿಲೀಪ್ ಮತ್ತು ತಂಡದವರು, ಹಾವನ್ನು ಹಿಡಿಯುವಾಗ ನಾಯಿಯು ಅಚಾನಕ್ಕಾಗಿ ಹಾವನ್ನ ಕಚ್ಚಿದೆ. ಅಲ್ಲದೆ ಹಾವು ಕೂಡ ತಕ್ಷಣ ತಪ್ಪಿಸಿಕೊಂಡು ಹುಲ್ಲಿನ ಬಳಿ ಅವಿತುಕೊಂಡಿತ್ತು. ಸುಮಾರು ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಆದರೆ ಕೊಳಕುಮಂಡಲ ಹಾವನ್ನು ಕಚ್ಚಿದ ಪರಿಣಾಮ ನಾಯಿ ಸಾವನ್ನಪ್ಪಿದೆ. ತಾಯಿಯನ್ನು ಕಳೆದುಕೊಂಡ ಮರಿಗಳು ಅನಾಥವಾಗಿವೆ.

Edited By : Vijay Kumar
PublicNext

PublicNext

08/12/2021 03:55 pm

Cinque Terre

21.49 K

Cinque Terre

1