ಅಮ್ಮ ಅಂದ್ರೆ ಅಮೃತ. ಅಪ್ಪ ಅಂದ್ರೆ ಆಕಾಶ. ಮಕ್ಕಳಿಗೆ ಇವರೇ ಸರ್ವಸ್ವ. ಇದು ಎಲ್ಲ ಕಾಲಕ್ಕೂ ಸತ್ಯ.ಫ್ಯಾಮಿಲಿ ಅಂತ ಬಂದಾಗ ಎಲ್ಲರೂ ಸಪೋರ್ಟ್ ಮಾಡ್ತಾರೆ. ದೇಹದ ಅಂಗವನ್ನ ದಾನ ಮಾಡೋರು ತೀರ ವಿರಳ. ಇಲ್ಲೊಬ್ಬ ಯುವಕ ಅಪ್ಪನಿಗೆ ತನ್ನ ಅರ್ಧ ಲಿವರ್ ಕೊಟ್ಟು ಜೀವ ಉಳಿಸಿದ್ದಾನೆ.
ಅಪ್ಪ ಎಂದೂ ಡ್ರಿಂಗ್ಸ್ ಮಾಡಿದವ್ರಲ್ಲ.ಸ್ಮೋಕಿಂಗ್ ನೋ ವೇ ಚಾನ್ಸೇ ಇಲ್ಲ. ಆದರೂ ಅಪ್ಪನ ಲಿವರ್ ಹಾಳಾಗಿತ್ತು.ಅಪ್ಪನ ಜೀವ ಇನ್ನೂ ಕೇವಲ ೬ ತಿಂಗಳು ಅಂದಾಗ ಎದೆ ಝಲ್ ಎಂದಿತ್ತು.ಲಿವರ್ ಡೋನರ್ ಹುಡುಕಾಟ ಫಲ ಕೊಡಲಿಲ್ಲ.ಅಪ್ಪ ನನ್ನ ಉಳಿಸಿಕೋ ಅನ್ನೋ ಮಾತು ಕಾಡ್ತಿತ್ತು.ಆಗಲೇ ನನ್ನ ಲಿವರ್ ಕೊಡೋ ಪ್ಲಾನ್ ಮಾಡಿದೆ.ಇದು ಆ ಯುವಕನ ಮನದ ಮಾತು.
ಪುತ್ರನ ಲಿವರ್ ಪಡೆದ ಅಪ್ಪ ಈಗ ಸೇಫ್. ಇದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸ್ಟೋರಿ. ಅಪ್ಪ ಯಾರು ? ಮಗ ಯಾರು ? ಯಾವ ಊರು ? ಈ ಮಾಹಿತಿ ಸಿಗೋದಿಲ್ಲ.ಆದರೆ ಈ ಸುದ್ದಿಯನ್ನ ಹ್ಯೂಮನ್ಸ್ ಆಫ್ ಮುಂಬೈ ಹೆಕ್ಕಿ ತೆಗೆದಿದೆ. ಸಾಮಾಜಿಕ ತಾಣದಲ್ಲೂ ಅಪ್ಪ-ಮಗನ ಆಫ್ಟರ್ ಆಪರೇಷನ್ ನ ಫೋಟೋ ಕೂಡ ಶೇರ್ ಆಗಿದೆ.ನಿಜಕ್ಕೂ ಇದು ಸ್ಪೂರ್ತಿದಾಯಕ ಸ್ಟೋರಿ ಅಲ್ವೇ ?
PublicNext
06/10/2021 04:38 pm