ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣ ಬಿಟ್ಟ ತಂಗಿ.!

ರಾಯಚೂರು: ಅಣ್ಣನ ಅಗಲಿಕೆಯ ಸುದ್ದಿ ಕೇಳಿ ತಂಗಿಯೂ ಕೂಡ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಹುಣಸಿಹಾಳ ಹುಡಾ ಗ್ರಾಮದಲ್ಲಿ ನಡೆದಿದೆ.

ಹುಣಸಿಹಾಳ ಹುಡಾ ಗ್ರಾಮದ ನರಸಪ್ಪ ಹೀರಾ (65) ಹಾಗೂ ಸಿರವಾರ ಗ್ರಾಮದ ಸಿದ್ದಮ್ಮ (50) ಮೃತ ಅಣ್ಣ-ತಂಗಿ. ಅನಾರೋಗ್ಯ ಹಿನ್ನೆಲೆಯಲ್ಲಿ ನರಸಪ್ಪ ಹೀರಾ ರಾಯಚೂರು ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನರಸಪ್ಪ ಮೃತಪಟ್ಟಿದ್ದಾರೆ. ಇತ್ತ ಅಣ್ಣ ಅನಾರೋಗ್ಯಕ್ಕೀಡಾದ ಸುದ್ದಿ ಕೇಳಿ ಸಿದ್ದಮ್ಮ ಸಿರವಾರದಿಂದ ಹುಣಸಿಹಾಳ ಹುಡಾ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಆಸ್ಪತ್ರೆಯಲ್ಲಿ ಅಣ್ಣನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಕ್ತದೊತ್ತಡ ಕಡಿಮೆಯಾಗಿ ಸಾವನ್ನಪ್ಪಿದ್ದಾಳೆ.

ಬದುಕಿನುದ್ದಕ್ಕೂ ಪರಸ್ಪರ ಅನೋನ್ಯವಾಗಿದ್ದ ಅಣ್ಣ-ತಂಗಿ ಸಾವಿನಲ್ಲೂ ಒಂದಾಗಿದ್ದಾರೆ. ಅಗಲಿದ ಅಣ್ಣ ತಂಗಿಯ ನೆನೆದು ಈಡೀ ಗ್ರಾಮವೇ ಕಣ್ಣೀರಾಗಿದೆ.

Edited By : Vijay Kumar
PublicNext

PublicNext

22/09/2021 03:49 pm

Cinque Terre

37.56 K

Cinque Terre

3