ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿರತೆಯೊಂದಿಗೆ ಹೋರಾಡಿ ಗೆದ್ದು ಪತ್ನಿ, ಮಗಳನ್ನ ರಕ್ಷಿಸಿದ ವ್ಯಕ್ತಿ..!

ಹಾಸನ: ಚಿರತೆ ಕಂಡರೆ ಯಾರಿಗೆ ತಾನೇ ಭಯವಿಲ್ಲ. ಆದರೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಂಡೆಕೆರೆ ತಾಂಡ್ಯ ಬಳಿ ವ್ಯಕ್ತಿಯೊಬ್ಬರು ದಾಳಿ ನಡೆಸಿದ ಚಿರತೆಯೊಂದಿಗೆ ಹೋರಾಡಿ ಪತ್ನಿ ಹಾಗೂ ಮಗಳನ್ನು ರಕ್ಷಿಸಿದ್ದಾರೆ.

ಹೌದು. ರಾಜಗೋಪಾಲ್ ನಾಯಕ್ ಎಂಬವರು ಸಿನಿಮೀಯ ರೀತಿ ಚಿರತೆಯೊಂದಿಗೆ ಹೋರಾಡಿ, ಅದನ್ನು ಕೊಂದು ತಮ್ಮ ಕುಟುಂಬವನ್ನು ಉಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಜಗೋಪಾಲ್ ನಾಯಕ್ ತಮ್ಮ ಪತ್ನಿ ಚಂದ್ರಮ್ಮ ಹಾಗೂ ಪುತ್ರ ಕಿರಣ್ ಜೊತೆಗೆ ಬೈಕಿನಲ್ಲಿ ಸಂಬಂಧಿಕರ ಮದುವೆ ಮುಗಿಸಿ ಮನೆಗೆ ವಾಪಸ್‌ ಆಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ಚಿರತೆ ಏಕಾಏಕಿ ಅಡ್ಡ ಬಂದಿದ್ದು, ಬೈಕ್ ಮೇಲೆ ನೇರವಾಗಿ ಎಗರಿದೆ. ಇದರಿಂದಾಗಿ ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ, ಮಗಳನ್ನ ರಕ್ಷಿಸಲು ರಾಜಗೋಪಾಲ್ ಮುಂದಾಗಿದ್ದಾರೆ. ಪ್ರಾಣದ ಬಗ್ಗೆ ಚಿಂತೆ ಮಾಡದೇ ಹಠಕ್ಕೆ ಬಿದ್ದು ಚಿರತೆ ಜೊತೆ ಸೆಣಸಾಡಿ ಕಡೆಗೂ ಚಿರತೆಯನ್ನ ಕೊಂದುಬಿಟ್ಟಿದ್ದಾರೆ.

ಈ ಚಿರತೆ ಮಂಗಳವಾರ ಬೆಳಗ್ಗೆಯಿಂದ ನಾಲ್ಕು ಜನರ ಮೇಲೆ ದಾಳಿ ಮಾಡಿ, ಸೆರೆ ಹಿಡಿಯಲು ಬಂದಿದ್ದ ವೈದ್ಯರಿಗೂ ಗಾಯಗೊಳಿಸಿ ಮೆರೆಯುತ್ತಿತ್ತು. ಆದರೆ ತನ್ನ ಕುಟುಂಬದವರ ರಕ್ಷಣೆಗಾಗಿ ಚಿರತೆಯನ್ನು ಏಕಾಂಗಿಯಾಗಿ ಕೊಂದು, ತಾನೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸದ್ಯ ಜಿಲ್ಲೆಯ ಜನರು ಕಡೆಗೂ ಚಿರತೆ ಆತಂಕ ದೂರವಾಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಘಟನೆ ಬಗ್ಗೆ ತನಿಖೆ ಕೈಗೊಂಡಿದೆ.

Edited By : Nagesh Gaonkar
PublicNext

PublicNext

24/02/2021 04:16 pm

Cinque Terre

94.05 K

Cinque Terre

29