ಚೆನ್ನೈ: ವಾವ್ಹ್ ಏನ್ ಚಂದಾ ಅಲ್ವಾ ಈ ಮದುವೆ ನೀವು ಇದುವರೆಗೂ ಇಂತಹ ಮದುವೆ ನೋಡಿರಲು ಸಾಧ್ಯವೇ ಇಲ್ಲ
ಪ್ಯಾರಾಚೂಟ್ ನಲ್ಲಿ,ವಿಮಾನದಲ್ಲಿ ಅಷ್ಟೇಯಾಕೆ ಕೊರೊನಾ ಟೈಮ್ ನಲ್ಲಿ ಆನ್ ನಲ್ಲಿಯೂ ಮದುವೆಗಳಾಗಿರುವುದನ್ನಾ ನಾವು ನೀವೆಲ್ಲಾ ಕಂಡಿದ್ದೇವೆ ಆದ್ರೆ ಈ ಮದುವೆ ಇವೆಲ್ಲವೊಕ್ಕಿಂತಲೂ ವಿಭಿನ್ನವಾಗಿದೆ.
ಹೌದು ಸರಿಸುಮಾರು 60 ಅಡಿ ಆಳದಲ್ಲಿ ಇಲ್ಲೊಂದು ಜೋಡಿ ಗೃಹಸ್ತಾಶ್ರಮಕ್ಕೆ ಕಾಲಿರಿಸಿದೆ.ಕೊರೊನಾ ಎಂಟ್ರೀ ಕೊಟ್ಟಾಗಿನಿಂದ ಜನ ಸಿಂಪಲ್ ಜೀವನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಅದ್ಧೂರಿ ಮದುವೆಗೆ ಬ್ರೇಕ್ ಹಾಕುತ್ತಿದ್ದಾರೆ.
ಆದರೆ, ಸಾಮಾಜಿಕ ಅಂತರ ಕಾಪಾಡಿಕೊಂಡು ತಮಿಳುನಾಡಿನ ಚೆನ್ನೈನ ದಂಪತಿ ಸಮುದ್ರದೊಳಗೆ ಮದುವೆ ಮಾಡಿಕೊಂಡಿದ್ದಾರೆ. ನೀಲಂಕರೈ ಕರಾವಳಿಯ ತೀರದಿಂದ 4.5 ಕಿ.ಮೀ ದೂರದಲ್ಲಿ 60 ಅಡಿಗಳ ಆಳದಲ್ಲಿ ಸಪ್ತಪದಿ ತುಳಿದಿದ್ದಾರೆ.
ಅರ್ಚಕರು ಸೂಚಿಸಿದ 'ಶುಭ' ಸಮಯವನ್ನು ಅನುಸರಿಸಿ ಬೆಳಗ್ಗೆ 7.30 ರ ಮೊದಲು ನೀರಿಗಿಳಿದ ವಿ. ಚಿನ್ನದುರೈ ಮತ್ತು ಶ್ವೇತಾ ನೀರೊಳಗೇ ಸಾಂಪ್ರದಾಯಿಕ ವಿವಾಹವಾಗಿದ್ದಾರೆ. ಶುಭ ಮಹೂರ್ತದಲ್ಲೇ ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಿದ್ದಾರೆ ನವ ದಂಪತಿ.
ಈ ರೀತಿ ವಿಶಿಷ್ಟವಾಗಿ ಮದುವೆಯಾಗಲು ವಧು ಶ್ವೇತಾ ಕಳೆದ ಒಂದು ತಿಂಗಳಿನಿಂದ ಸ್ಕೂಬಾ ಡೈವಿಂಗ್ ಕೋರ್ಸ್ ತರಬೇತಿಗೆ ಪಡೆದಿದ್ದಾರೆ.
ಕೊಯಮತ್ತೂರು ಮೂಲದ ವಧು, ಆಕೆಯ ಪೋಷಕರು ಆತಂಕಕ್ಕೊಳಗಾಗಿದ್ದರು. ಆದ್ರೆ ಎಲ್ಲ ಅಡೆತಡೆಗಳನ್ನು ದಾಟಿ ದಂಪತಿ 45 ನಿಮಿಷಗಳ ಕಾಲ ನೀರೊಳಗಿದ್ದು ಮದುವೆಯಾಗಿದ್ದಾರೆ.ಈ ವೇಳೆ ವರ - ವಧುವಿಗೆ ಪ್ರಪೋಸ್ ಮಾಡಿದ್ದಾರೆ.
ಸಾಂಪ್ರದಾಯಿಕ ಉಡುಪಿನಲ್ಲೇ ಮದುವೆಯಾಗಿದ್ದಾರೆ.
ಈ ಮದುವೆ ಸಮಾರಂಭವನ್ನು ನೀರೊಳಗೆ ಚಿತ್ರೀಕರಣವನ್ನೂ ಮಾಡಲಾಗಿದೆ. ತಾಳಿ ಕಟ್ಟಿದ ಬಳಿಕ ಹರ್ಷೋದ್ಗಾರದೊಂದಿಗೆ ನವ ವಧು - ವರ ನೀರೊಳಗಿಂದ ಹೊರಬಂದು ಹರ್ಷ ವ್ಯಕ್ತಪಡಿಸಿದ್ದಾರೆ.
PublicNext
04/02/2021 02:44 pm