ಮುಂಬೈ: ಮಹಿಳೆಯ ಬೆತ್ತಲು ಚಿತ್ರ ಹೋಲುವಂತೆ ನಿಮ್ಮ ಲೋಗೋ ಇದೆ ಎಂದು ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಟ್ಟೆಗಳನ್ನು ಮಾರಾಟ ಮಾಡುತ್ತಿರುವ ಖ್ಯಾತ ಆನ್ ಲೈನ್ ಶಾಪಿಂಗ್ ತಾಣ ಮಿಂತ್ರಾ ಕಂಪನಿ ತನ್ನ ಲೋಗೋ ವಿನ್ಯಾಸವನ್ನು ಬದಲಾಯಿಸಿಕೊಂಡಿದೆ.
ಅವೆಸ್ಟಾ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆಯ ಹೋರಾಟಗಾರ್ತಿಯೊಬ್ಬರು ಮಿಂತ್ರಾ ಸಂಸ್ಥೆ ಮಿಂತ್ರಾ ಕಂಪನಿಯ ಹಳೆಯ ಲೋಗೋ ಬಗ್ಗೆ ಆಕ್ಷೇಪವೆತ್ತಿದ್ದರು. ಇದು ಮಹಿಳೆಗೆ ಅವಮಾನ ಮಾಡಿದ ರೀತಿಯಲ್ಲಿದೆ ಎಂದು ದೂರು ನೀಡಿದ್ದರು. ಅಷ್ಟೇ ಅಲ್ಲ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಭಿಯಾನ ಆರಂಭಿಸಿದ್ದರು.
ಈ ಹಿನ್ನಲೆಯಲ್ಲಿ ಮಿಂತ್ರಾ ಕಂಪನಿ ತನ್ನ ಲೋಗೋ ವಿನ್ಯಾಸ ಬದಲಾಯಿಸಿಕೊಂಡಿದೆ.
PublicNext
30/01/2021 08:36 pm