ಗಾಜಿಯಾಬಾದ್‍ನ ಇಂದಿರಾಪುರಂ ನಿವಾಸಿ ಸಯ್ಯದ್ ರಫತ್ ಪರ್ವೀನ್ ಎಂಬ ಮಹಿಳೆ ಮೆದುಳಿನಲ್ಲಿ ರಕ್ತಸ್ರಾವವಾಗಿ ಬ್ರೇನ್ ಡೆಡ್ ಆಗಿತ್ತು. ವೈಶಾಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಸಾವನ್ನಪ್ಪುತ್ತಿದ್ದ ಮಹಿಳೆ ತನ್ನ ಅಂಗಾಂಗಗಳನ್ನು ದಾನ ನೀಡುವ ಮೂಲಕ ನಾಲ್ಕು ಜನರ ಜೀವನಕ್ಕೆ ಗಿಫ್ಟ್ ನೀಡಿದ್ದಾಳೆ.
ಕೌನ್ಸಲಿಂಗ್ ಬಳಿಕ ಮಹಿಳೆ ಕುಟುಂಬಸ್ಥರು ಆಕೆಯ ಅಂಗಾಂಗ ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಹೃದಯ, ಕಿಡ್ನಿ ಹಾಗೂ ಲಿವರ್‍ನ್ನು ದಾನ ಮಾಡಿದ್ದಾರೆ. ಹೃದಯವನ್ನು ಸಹ ಅಂಬುಲೆನ್ಸ್ ನಲ್ಲಿ ಗ್ರೀನ್ ಕಾರಿಡಾರ್ ಮೂಲಕ ಸಾಕೇತ್‍ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಕಿಡ್ನಿ ಹಾಗೂ ಲಿವರ್‍ನ್ನು ನಮ್ಮ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ ಕಸಿ ಮಾಡಿ, ಇನ್ನೊಂದು ಕಿಡ್ನಿಯನ್ನು ಆರ್ಟಿಮಿಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
PublicNext
27/12/2020 08:29 am