ಅಂಬಾಲ(ಹರಿಯಾಣ) : ಭಾರತೀಯ ವಾಯುಪಡೆಯ (ಐಎಎಫ್) ರಫೇಲ್ ಸ್ಕ್ವಾಡ್ರನ್ ನ ಮೊದಲ ಮಹಿಳಾ ಫೈಟರ್ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಆಗಿ ಶಿವಾಂಗಿ ಸಿಂಗ್ ಆಯ್ಕೆಯಾಗಿದ್ದಾರೆ.
ಭಾರತೀಯ ವಾಯು ಪಡೆಯ ರಫೇಲ್ ಫೈಟರ್ ಜಟ್ ನ ಪ್ರಥಮ ಮಹಿಳಾ ಪೈಲಟ್ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಎಸ್..ವಾರಣಾಸಿ ಮೂಲದ ಐಎಎಫ್ ನ ಸಮರ್ಥ ಮಹಿಳಾ ಪೈಲಟ್ ಪ್ಲೈಟ್ ಲೆಫ್ಟಿನೆಂಟ್ ಆಗಿ ಶಿವಾಂಗಿ ಸಿಂಗ್ ಈ ಯುದ್ಧ ವಿಮಾನವನ್ನು ಹಾರಿಸುವ ದೇಶದ ಪ್ರಥಮ ವನಿತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2017ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಶಿವಾಂಗಿ ಸಿಂಗ್ ಯುದ್ಧ ವಿಮಾನಗಳ ಹಾರಾಟ ಮತ್ತು ಸಮರ ಕೌಶಲ್ಯದಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ.
ಭಾರತದ ಹೆಮ್ಮೆಯ ವೀರಾಗ್ರಣಿ ಅಭಿನಂದನ್ ವರ್ಧಮಾನ್ ಅವರೊಂದಿಗೆ ಕೆಲವು ಯುದ್ಧ ವಿಮಾನಗಳನ್ನು ಹಾರಿಸಿರುವ ಅನುಭವ ಹೊಂದಿದ್ದಾರೆ.
ಅಪಾರ ದೇಶಪ್ರೇಮಿ ಮತ್ತು ಅತ್ಯಂತ ಚಾಣಕ್ಷರಾಗಿರುವ ಪ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ಅವರನ್ನು ರಫೇಲ್ ಪೈಟರ್ ಜಟ್ ಹಾರಾಟಕ್ಕೆ ಆಯ್ಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇವರು ಈಗ ಹರಿಯಾಣದ ಅಂಬಾಲ ವಾಯುನೆಲೆಗೆ ದಾವಿಸಿದ್ದು, ಹೊಸ ರಫೇಲ್ ಜಟ್ ಹಾರಾಟದ ಬಗ್ಗೆ ಸಮಗ್ರ ತರಬೇತಿ ಪಡೆಯಲಿದ್ದಾರೆ.
ಈ ಮೂಲಕ ಐಎಎಫ್ ನ 17 ಸ್ಕ್ವಾಡ್ರನ್ ಗೋಲ್ಡನ್ ಆಯರೋ ಪಡೆಗೆ ಪ್ರಥಮ ಮಹಿಳಾ ಪೈಲೆಟ್ ಆಗಿ ಸೇರ್ಪಡೆಯಾಗಿದ್ದಾರೆ.
ಇದು ದೇಶದ ವನಿತೆಯರಿಗೆ ಹೆಮ್ಮೆಯ ಸಂಗತಿಯಾಗಿದೆ.
PublicNext
23/09/2020 02:02 pm