ಪ್ರಾಣಿಪ್ರಿಯರು ತಮ್ಮ ಮುದ್ದು ನಾಯಿಗಳಿಗಾಗಿ ಏನೇಲ್ಲಾ ಮಾಡತ್ತಾರೆ ಎನ್ನುದನ್ನಾ ಆ ನಾವು ನೀವೆಲ್ಲಾ ನೋಡಿರುತ್ತೇವೆ ಕೇಳಿರುತ್ತವೆ.
ಪ್ರಾಮಾಣಿಕತೆಗೆ ಹೆಸರುವಾಸಿಯಾದ ಈ ಪ್ರಾಣಿ, ಮನುಷ್ಯನ ಆಪ್ತ ಮಿತ್ರನಂತಿರುತ್ತದೆ.
ಇಲ್ಲೊಬ್ಬ ಶ್ವಾನ ಪ್ರಿಯೆ ತನ್ನ ಮುದ್ದು ನಾಯಿಯ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿದ್ದಾರೆ.
ಪ್ರೀತಿಯಿಂದ ನಾಯಿಯ್ನನು ಸಾಕಿದ ಮಾಲಿಕರು ಕೂಡಾ ಅದನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಸದ್ಯ ಮಹಿಳೆಯೊಬ್ಬಳು ತನ್ನ ಪ್ರೀತಿಯ ನಾಯಿಗಾಗಿ ಮಾಡಿದ ಫೋಟೋಶೂಟ್ ಭಾರೀ ವೈರಲ್ ಆಗಿದೆ.
ತಮ್ಮ ಪ್ರೀತಿಯ ಸಾಕು ನಾಯಿಗೆ ಟೆಕ್ಸಾಸ್ ನ ಕೈಟಿ ಎಂಬುವವರು ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿದ್ದಾರೆ.
ಬೀದಿಯಲ್ಲಿದ್ದ 1 ವರ್ಷದ ಗೋಲ್ಡನ್ ರಿಟ್ರೀವರ್ ನಾಯಿಯನ್ನು ತಂದು ಪ್ರೀತಿಯಿಂದ ಸಾಕಿದ್ದು ಶ್ವಾನ ಅಮ್ಮನಾಗುತ್ತಿರುವ ಖುಷಿಯನ್ನು ಫೋಟೋ ಶೂಟ್ ಮಾಡಿಸುವ ಮೂಲಕ ಸಂಭ್ರಮಿಸಿದ್ದಾಳೆ.
ಫೋಟೋ ಶೂಟ್ ಆದ ಮೂರೇ ದಿನಗಳಲ್ಲಿ ನಾಯಿ ಎಂಟು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.
ಪ್ರಾಣಿಗಳನ್ನು ಹೇಗೆ ನೋಡಿಕೊಳ್ಳಬೇಕು, ಪ್ರೀತಿ ತೋರಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ಈ ಫೋಟೋ ಶೂಟ್ ಮಾಡಿಸಿದ್ದಾಗಿ ಹೇಳಿದ್ದಾಳೆ ಕೈಟಿ.
PublicNext
17/12/2020 05:16 pm