ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್​, ರಷ್ಯಾ ಸೇರಿ 7 ಮಕ್ಕಳಿಗೆ ಬದುಕು ನೀಡಿ ಉಸಿರು ನಿಲ್ಲಿಸಿದ ಸೂರತ್‌ ಬಾಲಕ!

ಸೂರತ್​: ಕೇವಲ ಎರಡು ವರ್ಷದ ಗುಜರಾತ್​ನ ಸೂರತ್​ ಬಾಲಕನೊಬ್ಬ ಏಳು ಮಕ್ಕಳಿಗೆ ಬದುಕು ನೀಡಿ ಉಸಿರು ನಿಲ್ಲಿಸಿದ್ದಾನೆ.

ಸಂಜೀವ್​ ಓಜಾ ಮತ್ತು ಅರ್ಚನಾ ದಂಪತಿಯ ಜಾಶ್​ ಓಜಾ ಡಿಸೆಂಬರ್​ 9ರಂದು ಸಂಬಂಧಿಕರ ಮನೆಯ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದ. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೆಲೆ ಭಾರೀ ಹೊಡೆತ ಬಿದ್ದಿದ್ದರಿಂದ ಮೆದುಳಿನಲ್ಲಿ ರಕ್ತಸ್ರಾವವಾಗಿ ಬಾಲಕನ ಮೆದುಳು ಡಿಸೆಂಬರ್​ 14ರಂದು ಕೆಲಸ ನಿಲ್ಲಿಸಿತ್ತು.

ಬಾಲಕನಲ್ಲಿ ಉಸಿರಾಟವಿತ್ತಾದರೂ ಆತನ ಮೆದುಳು ಸಂಪೂರ್ಣ ಸ್ತಬ್ಧವಾಗಿತ್ತು. ಮಗ ಇನ್ನು ಬದುಕುವುದಿಲ್ಲ ಎನ್ನುವುದು ತಿಳಿದ ಸಂಜೀವ್​ ದಂಪತಿ ಪುತ್ರನ ದೇಹದ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರ ಮಾಡಿದರು. ಅದರಂತೆ ಮಗುವಿನ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಯಕೃತ್​, ಕಣ್ಣನ್ನು ದಾನ ಮಾಡಲಾಗಿದೆ. ಈ ಮೂಲಕ ಮಗುವಿನ ಅಂಗಾಂಗಳನ್ನು ಏಳು ಮಕ್ಕಳಿಗೆ ದಾನ ಮಾಡಲಾಗಿದ್ದು, ಅತ್ಯಂತ ಕಿರಿಯ ಅಂಗಾಂಗ ದಾನಿಯಾಗಿ ಆತ ಹೊರಹೊಮ್ಮಿದ್ದಾನೆ.

ವಿಶೇಷವೆಂದರೆ ರಷ್ಯಾದ ನಾಲ್ಕು ವರ್ಷದ ಮಗುವಿಗೆ ಜಾಶ್​ನ ಹೃದಯವನ್ನು ಅಳವಡಿಸಿದರೆ, ಉಕ್ರೇನ್​ನ ನಾಲ್ಕು ವರ್ಷದ ಮಗುವಿಗೆ ಜಾಶ್‌ನ ಶ್ವಾಸಕೋಶಗಳನ್ನು ಕಸಿ ಮಾಡಲಾಗಿದೆ. ಶ್ವಾಸಕೋಶ ಮತ್ತು ಹೃದಯವನ್ನು ಸೂರತ್​ನಿಂದ 160 ಕಿ.ಮೀ ದೂರದ ಚೆನ್ನೈಗೆ ಹೆಲಿಕಾಫ್ಟರ್​ ಮೂಲಕ ಸಾಗಿಸಲಾಗಿದೆ. ಎರಡು ವರ್ಷದ ಬಾಲಕಿಗೆ ಜಾಶ್​ನ ಯಕೃತ್​​ನ್ನು ಅಳವಡಿಸಲಾಗಿದೆ. ಮೂತ್ರಪಿಂಡಗಳನ್ನು 265 ಕಿ.ಮೀ ದೂರದ ಅಹಮದಾಬಾದ್​ಗೆ ರವಾನಿಸಲಾಗಿದ್ದು, ಅಲ್ಲಿ 13 ವರ್ಷ ಮತ್ತು 17 ವರ್ಷದ ಇಬ್ಬರು ಬಾಲಕಿಯರಿಗೆ ಕಸಿ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

17/12/2020 03:22 pm

Cinque Terre

68.19 K

Cinque Terre

31