ಬೆಂಗಳೂರು: ಯುವಕನೋರ್ವ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಎಂಟು ಜನರ ಬಾಳಿಗೆ ಬೆಳಕಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯ ಮಂಡಿಬೆಲೆ ಗ್ರಾಮದ ನಿವಾಸಿ ಶಿವರಾಜು (26) ಸಾವಿನಲ್ಲೂ 8 ಜನರ ಬಾಳಿಗೆ ಬೆಳಕಾದ ಯುವಕ. ಅಪಘಾತದಲ್ಲಿ ಶಿವರಾಜು ಅವರ ತಲೆಭಾಗಕ್ಕೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿತ್ತು. ಅವರನ್ನ ಕೋಡಿಗೆಹಳ್ಳಿಯ ಆಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎಂಟು ದಿನ ಚಿಕಿತ್ಸೆಗೆ ಶಿವರಾಜು ಸ್ಪಂದನೆ ನೀಡಿರಲಿಲ್ಲ. ಶಿವರಾಜು ಬದುಕುವುದು ಅಸಾಧ್ಯ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಹೀಗಾಗಿ ಶಿವರಾಜು ತಂದೆ ಮುನಿರಾಜು ಮತ್ತು ತಾಯಿ ಮುನಿಲಕ್ಷ್ಮಿ ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ಪೋಷಕರ ಅನುಮತಿ ಮೇರೆಗೆ ವೈದ್ಯರು ಅಂಗಾಂಗಳನ್ನು ಪಡೆದುಕೊಂಡಿದ್ದಾರೆ. ಶಿವರಾಜು ಅವರ ಅಂಗಾಂಗದಿಂದ ಎಂಟು ಜನರಿಗೆ ಸಹಾಯವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
PublicNext
15/11/2020 07:31 pm