ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

18 ಕಿ.ಮೀ ಕ್ರಮಿಸಿ ಬುಡಕಟ್ಟು ಮಕ್ಕಳು, ಮಹಿಳೆಯರ ಕಾಳಜಿ- ಅಂಗನವಾಡಿ ಕಾರ್ಯಕರ್ತೆ ಕೆಲಸಕ್ಕೆ ಭಾರೀ ಮೆಚ್ಚುಗೆ

ಮುಂಬೈ: 18 ಕಿ.ಮೀ ಕ್ರಮಿಸಿ ಬುಡಕಟ್ಟು ಮಕ್ಕಳು ಹಾಗೂ ಮಹಿಳೆಯರ ಬಗ್ಗೆ ಕಾಳಜಿ ತಗೆದುಕೊಳ್ಳುತ್ತಿರುವ ಮಹಾರಾಷ್ಟ್ರದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಅನುಭವಿ ನಾವಿಕರನ್ನು ಹೊರತುಪಡಿಸಿ ನರ್ಮದಾ ನದಿಯಲ್ಲಿ ದೋಣಿಯ ಮೂಲಕ ಒಬ್ಬರೇ ಹೋಗುವುದು ಭಾರೀ ಕಷ್ಟದ ವಿಚಾರ. ಆದರೆ ಅಂಗನವಾಡಿ ಕಾರ್ಯಕರ್ತೆ 27 ವರ್ಷದ ರೇಲು ವಾಸವೆ ಅವರು ತಮ್ಮ ಹಳ್ಳಿಯಿಂದ ನದಿಯ ಹರಿವನ್ನು ಜೀವನದುದ್ದಕ್ಕೂ ನೋಡಿದ್ದಾರೆ. ಆದ್ದರಿಂದ ಕೊರೊನಾ ವೈರಸ್ ಭೀತಿ ವೇಳೆ ಬುಡಕಟ್ಟು ಜನಾಂಗದವರ ಆಹಾರ ಮತ್ತು ವೈದ್ಯಕೀಯ ತಪಾಸಣೆಗಾಗಿ ಅವರು ದೋಣಿ ಮೂಲಕ ಅಂಗನವಾಡಿಗೆ ಪ್ರಯಾಣಿಸಿದ್ದಾರೆ.

ರೇಲು ಕೆಲಸ ಮಾಡುವ ಅಂಗನವಾಡಿ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ದೂರದ ಬುಡಕಟ್ಟು ಗ್ರಾಮವಾದ ಚಿಮಾಲ್ಖಾಡಿಯಲ್ಲಿದೆ. ಇಲ್ಲಿಗೆ ರಸ್ತೆ ಮಾರ್ಗ ಕಳಪೆಯಾಗಿರುವುದರಿಂದ ಕುಗ್ರಾಮಗಳನ್ನು ತಲುಪುವ ಏಕೈಕ ಮಾರ್ಗವೆಂದರೆ ಸುಮಾರು 18 ಕಿ.ಮೀ. ದೋಣಿ ಮತ್ತು ಮರಳು ದಾರಿಯಾಗಿದೆ.

ರೇಲು ಅವರು ನವಜಾತ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ 25 ಮಕ್ಕಳು ಮತ್ತು ಏಳು ಗರ್ಭಿಣಿಯರಿಗೆ ಸರಿಯಾದ ಪೌಷ್ಠಿಕಾಂಶ ಆಹಾರ ನೀಡಲು ದೋಣಿಯಲ್ಲಿ ಪ್ರಯಾಣ ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಅವರು ಸ್ಥಳೀಯ ಮೀನುಗಾರರಿಂದ ಕುಗ್ರಾಮಗಳಾದ ಅಲಿಗಟ್ ಮತ್ತು ದಾದರ್ಗೆ ಪ್ರಯಾಣಿಸಲು ಸಣ್ಣ ದೋಣಿ ಎರವಲು ಪಡೆದರು. ಏಪ್ರಿಲ್‌ನಿಂದ ರೇಲು ಅವರು ಬುಡಕಟ್ಟು ಜನಾಂಗದವರನ್ನು ಪರೀಕ್ಷಿಸಲು ವಾರದಲ್ಲಿ ಐದು ದಿನ ದೋಣಿಯಲ್ಲಿ ಹೋಗುತ್ತಿದ್ದಾರೆ.

Edited By : Vijay Kumar
PublicNext

PublicNext

15/11/2020 03:03 pm

Cinque Terre

59.62 K

Cinque Terre

3