ಚಿಕ್ಕಬಳ್ಳಾಪುರ: ಸರಿಯಾದ ದರ ಸಿಗದ ಕಾರಣಕ್ಕೆ ರೈತರು ರಸ್ತೆ ಬದಿಯಲ್ಲಿ ಕೊತ್ತಂಬರಿ ಸೊಪ್ಪು ಎಸೆದಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಈ ಸಂಗತಿ ನಡೆದಿದೆ.
ಬೆಳ್ಳಂ ಬೆಳಗ್ಗೆ ದೊಡ್ಡಬಳ್ಳಾಪುರ ನೆಲಮಂಗಲ ಮಾರ್ಗದ ಕೋಡಿ ಪಾಳ್ಯ ಬಳಿ ರಸ್ತೆ ಬದಿ ಸರಿಸುಮಾರು 2-3 ಲೋಡ್ ನಷ್ಟು ಕೊತ್ತಂಬರಿ ಸೊಪ್ಪನ್ನು ಸುರಿದು ಹೋಗಿದ್ದಾರೆ. ಇದನ್ನು ಕಂಡ ದಾರಿ ಹೋಕರು ನನಗೆ ಒಂದು, ನನಗೆ ಒಂದು ಅಂತ ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನು ಹೊತ್ತೊಯ್ದಿದ್ದಾರೆ. ಆದರೆ ಇಲ್ಲಿ ಕೊತ್ತಂಬರಿ ಸೊಪ್ಪು ಸುರಿದು ಹೋದವರು ಯಾರು ಎಂಬುದು ತಿಳಿದುಬಂದಿಲ್ಲ. ರೈತರು ಮಾರುಕಟ್ಟೆಗೆ ತಂದು ರೇಟ್ ಇಲ್ಲ ಅಂತ ಸುರಿದು ಹೋಗಿರಬಹುದು ಎನ್ನಲಾಗಿದೆ.
PublicNext
24/08/2021 01:52 pm