(ಯುಪಿ)ಜಾನ್ಪುರ್ : ಯುಪಿಯಲ್ಲಿ ವೇದಿಕೆಯ ಮೇಲೆ ಸಾವುಗಳ ಪ್ರಕ್ರಿಯೆ ಆಗುತ್ತಿರೋದು ದುರಂತವೇ. ಫತೇಪುರದಲ್ಲಿ ಹನುಮಂತನಾದ ಕಲಾವಿದ ಹಾಗೂ ಜೌನ್‌ಪುರದಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದನ ಮರಣದ ನಂತರ ಇದೀಗ ಜೌನ್‌ಪುರ ಜಿಲ್ಲೆಯ ರಾಮಲೀಲಾ ವೇದಿಕೆಯ ಮೇಲೆ ಶಿವ ವೇಷಧಾರಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಶಿವನ ಪಾತ್ರದಲ್ಲಿ ನಟಿಸುತ್ತಿದ್ದ ಕಲಾವಿದ ರಾಮ್ ಪ್ರಸಾದ್ ಅಲಿಯಾಸ್ ಛಬ್ಬನ್ ಅವರಿಗೆ ಹೃದಯಾಘಾತವಾಗಿದೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದ್ರೆ ವ್ಯಕ್ತಿ ಅಷ್ಟರಲ್ಲೆ ಕಲಾವಿದ ಕೊನೆಯುಸಿರೆಳೆದಿದ್ದಾನೆ. ಕಲಾವಿದನ ಸಾವಿನ ನಂತರ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಸಮಿತಿಯು ರಾಮಲೀಲಾ ವೇದಿಕೆಯನ್ನು ತಕ್ಷಣವೇ ಮುಂದೂಡಿತು.
PublicNext
12/10/2022 04:42 pm