ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೀವ ಹಿಂಡುತ್ತಿದೆ ಎಂಡೋಸಲ್ಫಾನ್: ಚೆಂದದ ಬಾಲ್ಯ ಕಳೆದುಕೊಂಡ ಗಗನ್

ಪುತ್ತೂರು- ಮಾರಕ ಮಹಾಮಾರಿ ಎಂಡೋಸಲ್ಫಾನ್ ರೋಗ ಮಂಗಳೂರು ಜನರ ಜನ್ಮ ಜಾಲಾಡಿ ಬಿಸಾಕಿದೆ‌. ಅದೇ ರೋಗಕ್ಕೆ ತುತ್ತಾಗಿ ಪಡಬಾರದ ಪಡಿಪಾಟಲು ಪಡುತ್ತಿರುವ ಪುತ್ತೂರಿ‌ನ ಬಾಲಕ ಗಗನ್ ಸಹಾಯಕ್ಕಾಗಿ ಕೈ ಚಾಚಿದ್ದಾನೆ‌.

ಸರ್ಕಾರ ಎಂಡೋಸಲ್ಫಾನ್ ಪೀಡಿತರ ಆರೋಗ್ಯದ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಂಡಿದ್ದೇನೋ ಖಂಡಿತ ಸತ್ಯ ಆದ್ರೆ ಅದರ ಪ್ರತಿಫಲವೆಲ್ಲ ಬಹುತೇಕ ರೋಗಿಗಳಿಗೆ ಸಕಾಲಕ್ಕೆ ತಲುಪಿದೆ ಎಂಬುದು ನೂರಕ್ಕೆ ನೂರರಷ್ಟು ಸುಳ್ಳು!

ಅದಕ್ಕೆ ಜೀವಂತ ಉದಾಹರಣೆ ಪುತ್ತೂರು ನಿವಾಸಿ ಗಗನ್ ಎಂಬ ಈ 9 ವರ್ಷದ ಬಾಲಕ. ಹುಟ್ಟಿನಿಂದ ಈತನಿಗೆ ಈ ಮಾರಕ ಖಾಯಿಲೆ ಅಂಟಿಕೊಂಡಿದೆ‌. ಆರೋಗ್ಯ ಇಲಾಖೆಯಿಂದ ಎಂಡೋಸಲ್ಫಾನ್ ಪೀಡಿತರಿಗೆ ಕೊಡಬೇಕಾದ ನೀಲಿ ಕಾರ್ಡನ್ನು ಗಗನ್ ಗೆ ನೀಡಲಾಗಿದೆ. ಸಂತ್ರಸ್ತ ಪಟ್ಟಿಯಲ್ಲೂ ಈ ಪೋರನ ಹೆಸರು ಸೇರಿಸಲಾಗಿದೆ‌. ಆದ್ರೆ ಅದರಿಂದ ಬರಬೇಕಾದ ಯಾವುದೇ ಸೌಲಭ್ಯ ಈತನಿಗೆ ಇನ್ನೂ ಸಿಕ್ಕಿಲ್ಲ. ಗಗನ್ ತಂದೆ ಕೃಷ್ಣಪ್ಪ ಗೌಡ ಒಬ್ಬ ಕೂಲಿ ಕಾರ್ಮಿಕ. ಇದಕ್ಕೆ ತಗುಲುವ ಎಲ್ಲ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದು. ಹೀಗಾಗಿ ಅದರ ಖರ್ಚು ನಿಭಾಯಿಸಲು ಗಗನ್ ತನ್ನ ತಂದೆಯೊಂದಿಗೆ ಭಿಕ್ಷೆ ಬೇಡುವ ನಿರ್ಧಾರ ಮಾಡಿದ್ದಾನೆ.‌

ಏನಿದು ಎಂಡೋಸಲ್ಫಾನ್?

ಎಂಡೋಸಲ್ಫಾನ್ ಎಂದರೆ ಇದು ಕ್ರಿಮಿನಾಶಕ ರಾಸಾಯನಿಕ. ಗೇರುಬೀಜದ ತೋಪುಗಳಲ್ಲಿನ ಕೀಟ ನಿಯಂತ್ರಣಕ್ಕಾಗಿ ಇದನ್ನ 20 ವರ್ಷಗಳ ಹಿಂದೆ ಸಿಂಪಡಿಸಲಾಗಿತ್ತು‌. ಅದರ ವಿಷ ಗಾಳಿಯಲ್ಲಿ ಹರಡಿ ಸಾವಿರಾರು ಜನಕ್ಕೆ ಎಂಡೋಸಲ್ಫಾನ್ ರೋಗ ಹರಡಿತ್ತು. 2011ರಲ್ಲೇ ಈ ಮಾರಕ ರಸಾಯನವನ್ನು ನಿಷೇಧಿಸಲಾಗಿದೆ.

Edited By : Nagaraj Tulugeri
PublicNext

PublicNext

03/11/2020 02:39 pm

Cinque Terre

55.83 K

Cinque Terre

1