ನವಲಗುಂದ : ನವಲಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಜೂನ್ 8ರಂದು ಅಂದರೆ ಬುಧವಾರದಂದು ಬೆಳಿಗ್ಗೆ ಹತ್ತು ಗಂಟೆಯಿಂದ ಸಾಯಂಕಾಲ ನಾಲ್ಕು ಗಂಟೆಯವರೆಗೆ ವಿದ್ಯುತ್ ಸರಬರಾಜು ಆಗುವ 110 ಕೆವ್ಹಿ ನವಲಗುಂದ ವಿದ್ಯುತ್ ಕೇಂದ್ರದಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.
ನವಲಗುಂದ ಪಟ್ಟಣ, ಅಳಗವಾಡಿ (EIP), ಯಮನೂರ (NJY), ಶಾನವಾಡ (NJY), ಕುಮಾರಗೋಪ್ಪ (EIP), ಇಬ್ರಾಹಿಂಪುರ (RURAL), ಕಡದಳ್ಳಿ(EIP), ಅಮರಗೋಳ(NJY), ಸೊಟಕನಾಳ (EIP), ಶಲವಡಿ (NJY), ಬಳ್ಳೂರು (EIP) ನಲ್ಲಿ ನಾಳೆ ವಿದ್ಯುತ್ ನಿಲುಗಡೆಯಾಗಳಿದ್ದು, ಚೆನ್ನಮ್ಮಕೆರೆ ನೀರು ನಿಲುಗಡೆಯಾಗಲಿದೆ ಎಂದು ಹೆಸ್ಕಾಂ, ಹುಬ್ಬಳ್ಳಿ ಗ್ರಾಮೀಣ ವಿಭಾಗ ಕಾರ್ಯನಿರ್ವಾಹಕ ಇಂಜಿನೀಯರ ಅವರಿಂದ ಪ್ರಕಟಣೆ ಹೊರಡಿಸಲಾಗಿದೆ.
Kshetra Samachara
07/06/2022 03:36 pm