ಧಾರವಾಡ : ಧಾರವಾಡ ರೋಲರ್, ಸ್ಟೇಟಿಂಗ್ ಅಸೋಸಿಯೇಶನ್ ವತಿಯಿಂದ ಹುಬ್ಬಳ್ಳಿಯ ಗಾಜಿನಮನೆಯ ಸ್ಕೇಟಿಂಗ್ ರಿಂಕ್ ನಲ್ಲಿ ಇತ್ತೀಚೆಗೆ ಎರ್ಪಡಿಸಲಾಗಿದ್ದ 8ನೇ ಜಿಲ್ಲಾ ಮಟ್ಟದ ಪಂದ್ಯಾವಳಿ ಹಾಗೂ ರಾಜ್ಯ ತಂಡ ಆಯ್ಕೆ ಪ್ರಕ್ರಿಯೆಯಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಆಕಾಡೆಮಿಯ 61 ಮಕ್ಕಳು ಭಾಗವಹಿಸಿ ಒಟ್ಟು 116 ಪದಕಗಳನ್ನು ಬಾಚಿಕೊಂಡಿದ್ದಾರೆ.
ಸ್ಪೀಡ್ ಕಾಡ್ ವಿಭಾಗದಲ್ಲಿ - 48 ಸ್ಪೀಡ್ ಇನಲೈನ್ ವಿಭಾಗದಲ್ಲಿ - 34 ರೋಲರ್ ಹಾಕಿ -ಯಲ್ಲಿ 3 ಪದಕ, ಬೇಸಿಕ್ ಇನ್ ಲೈನ್ ಅಲ್ಲಿ - 30 ಪದಕ ಪಡೆದಿದ್ದಾರೆ.ಅಕ್ಟೋಬರ್ ನಲ್ಲಿ ನಡೆಯಲಿರುವ 38ನೇ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನಶಿಪ್ ನಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ 33 ಮಕ್ಕಳು ಆಯ್ಕೆಯಾಗಿದ್ದಾರೆ.
ಇನ್ನು ಈ ಮಕ್ಕಳಿಗೆ ಅಕ್ಷಯ ಸೂರ್ಯ ವಂಶಿಯವರು ತರಬೇತಿ ನೀಡಿದ್ದು, ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಆಕಾಡೆಮಿಯ ಕ್ಲಬ್ ನ ಸದ್ಯಸರು ಹಾಗೂ ಪೋಷಕರು ಮಕ್ಕಳಿಗೆ ಪ್ರೊತ್ಸಾಹನಿಡಿದ್ದಾರೆ.
Kshetra Samachara
11/10/2022 01:27 pm