ಹುಬ್ಬಳ್ಳಿ: ರಾಜನಗರದಲ್ಲಿರುವ ಕೆಎಸ್ ಸಿಎ ಮೈದಾನದಲ್ಲಿ ನಡೆಯಬೇಕಾಗಿದ್ದ ಭಾರತ- ನ್ಯೂಜಿಲೆಂಡ್ "ಎ" ತಂಡಗಳ ನಡುವಿನ ಚತುರ್ದಿನ ಕ್ರಿಕೆಟ್ ಪಂದ್ಯ, ಮೈದಾನದಲ್ಲಿ ತೇವಾಂಶವಿದ್ದ ಕಾರಣ ಪಂದ್ಯದ ಸಮಯ ಮುಂದೂಡಲಾಗಿತ್ತು.
ಬೆಳಿಗ್ಗೆ 9:30ಕ್ಕೆ ಆರಂಭವಾಗಬೇಕಾಗಿದ್ದ ಪಂದ್ಯ ಬುಧವಾರ ರಾತ್ರಿ ಮಳೆಯಾದ ಕಾರಣದಿಂದ ಮೈದಾನದಲ್ಲಿ ತೇವಾಂಶ ಇತ್ತು. ಇದೀಗ ಮೈದಾನ ಒಣಗಿದ್ದು, ಸದ್ಯ ಪಂದ್ಯ ಆರಂಭಗೊಳ್ಳಲಿದೆ.
ಇನ್ನು, ಮೂರು ವರ್ಷಗಳ ಬಳಿಕ ಕೆಎಸ್‌ಸಿಎ ಮೈದಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಪಂದ್ಯ ವೀಕ್ಷಣೆಗೆ ನೂರಾರು ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಕ್ರೀಡಾ ಅಭಿಮಾನಿಗಳು ನೆರೆದಿದ್ದಾರೆ.
ವಿದ್ಯಾರ್ಥಿಗಳು, ಅಭಿಮಾನಿಗಳು ಉಭಯ ತಂಡಗಳ ತಮ್ಮ ನೆಚ್ಚಿನ ಆಟಗಾರರ ಆಟೋಗ್ರಾಫ್ ಹಾಗೂ ಸೆಲ್ಫಿಗೆ ಮುಗಿ ಬಿದ್ದಿದ್ದಾರೆ. ಆಟಗಾರರೂ ಬೇಸರಿಸದೆ ಸೆಲ್ಫಿಗೆ ಪೋಸ್ ಕೊಟ್ಟು ಸಂಭ್ರಮಿಸಿದರು.
Kshetra Samachara
08/09/2022 03:57 pm