ಕುಂದಗೋಳ : ಎಲ್ಲೆಡೆ ಕ್ರೀಡಾ ಚಟುವಟಿಕೆ, ಕುದುರೆ ಏರಿ ಬಂದು ದೀಪ ಬೆಳಗಿಸುವ ಉತ್ಸಾಹಿ ಕ್ರೀಡಾ ಪಟುಗಳು, ಆ ಕ್ರೀಡಾ ಪಟುಗಳಿಗೆ ಸ್ಪೂರ್ತಿ ತುಂಬುವ ದೈಹಿಕ ಶಿಕ್ಷಕರು, ಆಟಕ್ಕಾಗಿ ಸಿದ್ಧಗೊಂಡ ಮೈದಾನ, ಇಷ್ಟೇಲ್ಲಾ ಅಭೂತಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದದ್ದು, ಕುಂದಗೋಳ ತಾಲೂಕಿನ ಪದವಿಪೂರ್ವ ಶಾಲಾ ಕಾಲೇಜಿನ ಕ್ರೀಡಾಕೂಟ ಆರಂಭದ ದಿನ.
ಸಂಪೂರ್ಣ ಕುಂದಗೋಳ ತಾಲೂಕಿನ ಕ್ರೀಡಾಕೂಟಕ್ಕೆ ವೇದಿಕೆಯಾದ ಕಮಡೊಳ್ಳಿ ಗ್ರಾಮದ ಪ್ರೌಢ ಶಾಲೆ ಆವರಣದಲ್ಲಿ ಖೋಖೋ, ಕಬಡ್ಡಿ, ವ್ಹಾಲಿಬಾಲ್, ಥ್ರೋ ಬಾಲ್, ರಿಲೇ ಸೇರಿದಂತೆ ವೈಯಕ್ತಿಕ ಆಟಗಳಲ್ಲಿ ಉತ್ಸಾಹಿ ಯುವಕ ಯುವತಿಯರ ಸೆಣಸಾಟ ನೋಡುಗರ ಮನ ಗೆದ್ದವು.
ಅದರಲ್ಲೂ ಪ್ರಶಸ್ತಿ ಸುತ್ತಿಗಾಗಿ ಪೈಪೋಟಿ ನಡೆಸುವ ಎಲ್ಲಾ ಕ್ರೀಡಾಪಟುಗಳ ಆಟದ ವೈಖರಿ ವಿಶೇಷವಾಗಿ ನೀಲಿ, ಹಳದಿ ಕ್ರೀಡಾ ಸ್ಫೂರ್ತಿ ತುಂಬಿ ಆಟದಲ್ಲಿ ಮಿಂದೆದ್ದ ಯುವಕ ಯುವತಿಯರ ನೋಟ ಅದೆಷ್ಟೋ ಕ್ರೀಡಾ ಪಟುಗಳಿಗೆ ಮೆರುಗು ತಂದಿತ್ತು. ಇನ್ನೂ ಕ್ರೀಡೆ ಗೆದ್ದವರಲ್ಲಿ ಆನಂದ ಸೋತವರಲ್ಲಿ ಮತ್ತೋಮ್ಮೆ ಗೆಲ್ಲಬಲ್ಲೇ ಎಂಬ ಛಲ ನೋಡುಗರಿಗೆ ಖುಷಿ ತಂದಿತು.
Kshetra Samachara
26/08/2022 10:10 pm