ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕರಿಯಮ್ಮನಿಗಾಗಿಯೇ ಹೋರಿಗಳ ಓಟ-ಆಟ-ಅತಿ ವೇಗದ ರೋಮಾಂಚನ !

ಹುಬ್ಬಳ್ಳಿ: ಗಾಮನಗಟ್ಟಿಯ ಕರಿಯಮ್ಮ ದೇವಿಯ ಜಾತ್ರೋತ್ಸವದ ಅಂಗವಾಗಿಯೇ ಖಾಲಿ ಗಾಡಾ ಓಡಿಸೋ ಸ್ಪರ್ಧೆ ಆಯೋಜಿಸಲಾಗಿದೆ.ಸುತ್ತ-ಮುತ್ತಲಿನ ಹಳ್ಳಿಗಳ ಎತ್ತುಗಳು, ಹೋರಿಗಳು ಈ ಒಂದು ಸ್ಪರ್ಧೆಯಲ್ಲಿ ಭಾಗಿ ಆಗಿವೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಹಿಂಭಾಗದ ಹೊಲದಲ್ಲಿಯೇ ಈ ಒಂದು ಸ್ಪರ್ಧೆ ಭರ್ಜರಿಯಾಗಿಯೇ ನಡೆದಿದೆ. ಬನ್ನಿ, ನೋಡೋಣ.

ಎತ್ತುಗಳ ಓಟ..ಎತ್ತುಗಳ ಸ್ಪರ್ಧೆ ನಿಜಕ್ಕೂ ರೋಚಕವಾಗಿಯೇ ಇರುತ್ತವೆ. ಸ್ಪರ್ಧೆಗೆಂದೇ ಹೋರಿಗಳ ಬೆಳೆಸೋ ರೈತರು ಇದ್ದಾರೆ. ಹೊಲದಲ್ಲಿ ಉಳಿಮೆ ಮಾಡಲೆಂದೇ ಎತ್ತುಗಳನ್ನೂ ಲಕ್ಷ ಗಟ್ಟಲೆ ದುಡ್ಡು ಕೊಟ್ಟು ಖರೀದಿ ಮಾಡೋ ರೈತರಿಗೇನೂ ಕಮ್ಮಿ ಇಲ್ಲ.ಆದರೆ, ಖಾಲಿ ಗಾಡಾ ಸ್ಪರ್ಧೆ ಅಂತ ಬಂದ್ರೆ, ಜಬರ್‌ದಸ್ತ ಓಡೋ ಹೋರಿಗಳು ಎತ್ತುಗಳು ರೆಡಿ ಆಗಿ ಬಿಡುತ್ತವೆ.

ನಿಜ, ಎತ್ತುಗಳಿಗೆ ಒಂದು ರೀತಿ ಖುಷಿ-ಒಂದು ರೀತಿ ಕಷ್ಟ. ಆದರೆ, ರೈತರಿಗೆ ಇವುಗಳನ್ನ ಸ್ಪರ್ಧೆಯಲ್ಲಿ ಓಡಿಸೋದು ಅಂದ್ರೆ ಡಬಲ್ ಟ್ರಿಲ್ ಖುಷಿ. ಆ ಒಂದು ಸಂತೋಷ ಗಾಮನಗಟ್ಟಿ ಗ್ರಾಮದ ಈ ಒಂದು ಹೊಲದಲ್ಲಿ ಕಂಡು ಬಂತು.

ಗಾಮನಗಟ್ಟಿಯ ಕರಿಯಮ್ಮನ ಜಾತ್ರೋತ್ಸವದ ಅಂಗವಾಗಿಯೇ ಈ ಒಂದು ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಜೋಡಿಗಳಿಗೆ ಬಹುಮಾನ ಕೂಡ ಇರುತ್ತದೆ. ಹಾಗೇ ಸ್ಪರ್ಧೆಯಲ್ಲಿ ಭಾಗಿ ಆಗಲು ದೇಣಿಗೆ ಕೊಡುವ ರೈತರ ಆ ದುಡ್ಡನ್ನ ಕರಿಯಮ್ಮನ ದ್ವಾರಭಾಗಿಲು ನಿರ್ಮಿಸಲು ಉಪಯೋಗಿಸಲಾಗುತ್ತಿದೆ.

ಖಾಲಿ ಗಾಡಾ ಓಡಿಸೋ ಸ್ಪರ್ಧೆ ನಿಜಕ್ಕೂ ರೋಮಾಂಚನಕಾರಿಯಾಗಿಯೇ ಕಾಣಿಸುತ್ತದೆ. ಎತ್ತುಗಳ ಓಟವೂ ಯಾವುದೇ ಇತರ ಸ್ಪರ್ಧೆಗೆ ಕಮ್ಮಿ ಇಲ್ಲ ಅನ್ನೋ ಹಾಗೇನೆ ಥ್ರಿಲ್ ಮೂಡಿಸುತ್ತದೆ.

-ರೇವನ್ ಪಿ.ಜೇವೂರ್,PublicNext ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

26/04/2022 10:00 pm

Cinque Terre

81.82 K

Cinque Terre

1

ಸಂಬಂಧಿತ ಸುದ್ದಿ