ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಳ್ಳಿಗಳಲ್ಲೂ ಕ್ರಿಕೆಟ್ ಕ್ರೇಜ್ ಹಾಪ್ ಪಿಚ್ ಪಂದ್ಯ ಆರಂಭ

ಕುಂದಗೋಳ : ಈಗಾಗಲೇ ಎಲ್ಲೇಡೆ ಐಪಿಎಲ್ ಸದ್ದು ಜೋರಾಗಿದೆ. ಅದರಂತೆ ಹಳ್ಳಿಯಲ್ಲೂ ಕ್ರೀಡಾ ಚಟುವಟಿಕೆಗಳು ಜೋರಾಗಿದ್ದು ಕುಂದಗೋಳ ತಾಲೂಕಿನ ದೇವನೂರು ಗ್ರಾಮದಲ್ಲಿ ಜೈ ಹನುಮಾನ್ ಯಂಗ್ ಕ್ರಿಕೆಟ್ ಕ್ಲಬ್ ಕ್ರಿಕೆಟ್ ಪಂದ್ಯ ಆಯೋಜಿಸಿ ಕ್ರೀಡಾಸಕ್ತರ ಮನ ಗೆದ್ದಿದೆ.

ದೇವನೂರು ಗ್ರಾಮದಲ್ಲಿ ಓಪನ್ ಕ್ರಿಕೆಟ್ ಹಾಪ್ ಪಿಚ್ ಪಂದ್ಯಾವಳಿಗೆ ಜೆಡಿಎಸ್ ಮುಖಂಡ ಹಜರತ್'ಅಲಿ ಜೋಡಮನಿ ಚಾಲನೆ ನೀಡಿದ್ದು, ಸದ್ಯ ಬಿರು ಬಿಸಿಲಿನ ತಾಪ ಲೆಕ್ಕಿಸದೆ ಕ್ರಿಕೆಟ್ ಆಟ ನಡೆದಿದೆ.

ದೇವನೂರಿನ ಯಲ್ಲಪ್ಪಗೌಡ್ರ ಪಾಟೀಲ ಇವರ ಹೊಲದಲ್ಲಿ ಕ್ರಿಕೆಟ್ ಟೂರ್ನಾಮೆಂಟ್ ಆರಂಭವಾಗಿದ್ದು, ಕುಂದಗೋಳ ತಾಲೂಕ ಸೇರಿದಂತೆ ಜಿಲ್ಲೆಯಾದ್ಯಂತ ಯುವಕರು ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಂಡು ಕ್ರೀಡಾಭಿರುಚಿ ಸವಿಯುತ್ತಿದ್ದಾರೆ.

ವಿಜೇತ ತಂಡಕ್ಕೆ ನಗದು ಹಣ ಟ್ರೋಫಿ ಸೇರಿ ಮೂರು ಬಹುಮಾನಗಳಿದ್ದು ಕ್ರಿಕೆಟ್ ಆಟ ಅತ್ಯಂತ ರೋಚಕವಾಗಿ ನಡೆದಿದೆ.

Edited By : Shivu K
Kshetra Samachara

Kshetra Samachara

07/04/2022 11:24 am

Cinque Terre

24.83 K

Cinque Terre

0

ಸಂಬಂಧಿತ ಸುದ್ದಿ