ಕುಂದಗೋಳ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಾರುತಿ ದೇವಸ್ಥಾನ ಮೂರಂಗಡಿ ಕೂಟ್ ಹಾಗೂ ಪಟ್ಟಣದ ಸಮಸ್ತ ರೈತ ಬಾಂಧವರ ಆಶ್ರಯದಲ್ಲಿ ನಾಳೆ (ಮಾರ್ಚ್ 5ರಂದು) ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಕುಂದಗೋಳದ ದೇವನೂರು ದಾರಿಯಲ್ಲಿರುವ ಕುಡುವಕ್ಕಲ ಹಾಗೂ ಭೋವಿ ಇವರ ಜಮೀನಿನಲ್ಲಿ ಖಾಲಿ ಗಾಡಾ ಓಡಿಸುವ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ 50 ಸಾವಿರ ರೂ. ಬಹುಮಾನ, ದ್ವಿತೀಯ 40 ಸಾವಿರ ರೂ. ಹಾಗೂ ತೃತೀಯ 30 ಸಾವಿರ ರೂ. ಬಹುಮಾನ ಸೇರಿ ಕ್ರಮವಾಗಿ 15 ಬಹುಮಾನ ಇರಲಿವೆ. ಇದಲ್ಲದೆ ಕಮಿಟಿ ವತಿಯಿಂದ ಕುಂದಗೋಳದ ಎತ್ತುಗಳಿಗೆ ಮೂರು ವಿಶೇಷ ಬಹುಮಾನಗಳಿವೆ. ನಾಳೆ ನಡೆಯಲಿರುವ ರಾಜ್ಯ ಮಟ್ಟದ ಖಾಲಿ ಗಾಡಾ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಕಮಿಟಿಯವರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
04/03/2022 09:37 pm