ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಯುವಕರಲ್ಲಿ ಹುಮ್ಮಸ್ಸು ತಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಕುಂದಗೋಳ: ಕುಂದಗೋಳ ತಾಲೂಕಿನ ಬು.ತರ್ಲಘಟ್ಟ ಗ್ರಾಮದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.

ಬು.ತರ್ಲಘಟ್ಟ ಗ್ರಾಮದಲ್ಲಿ ಆರಂಭವಾದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಮಾಜಿ ಶಾಸಕ ಎಂ.ಎಸ್‌ ಅಕ್ಕಿ ಉದ್ಘಾಟಿಸಿ ಯುವಕರಿಗೆ ಹುರಿದುಂಬಿಸಿದ್ದಾರೆ. ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳಿಂದ 18 ತಂಡಗಳು ಬು.ತರ್ಲಘಟ್ಟ ಗ್ರಾಮದಲ್ಲಿ ನಡೆದ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಸುತ್ತಿಗಾಗಿ ಸೆಣಸಾಡಿದವು.

ಈ ಹೊನಲು ಬೆಳಕಿನ ಕಬಡ್ಡಿಯ ರೋಚಕ ಪಂದ್ಯದಲ್ಲಿ ಪ್ರಥಮ ಬಹುಮಾನವನ್ನು ಸ್ವಸ್ತಿಕ್ ತಂಡ ಶಿಗ್ಗಾಂವ ಪಡೆದರೆ, ದ್ವೀತಿಯ ಬಹುಮಾನವನ್ನು ಪವನಪುತ್ರ ಗೌಡಗೇರಿ ತಂಡ ಪಡೆಯಿತು, ತೃತೀಯ ಬಹುಮಾನವನ್ನು ಭಗತ್‌ಸಿಂಗ್ ತಂಡ ಬು.ತರ್ಲಘಟ್ಟ ಪಡೆಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಎಸ್.ಅಕ್ಕಿ, ಕಾಂಗ್ರೆಸ್ ಮುಖಂಡ ಜಗದೀಶ್ ಉಪ್ಪಿನ್, ವಿರೇಶ್ ನಾಗಾವಿಮಠ ಕ್ರಮವಾಗಿ ಮೂರು ಬಹುಮಾನ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಭು ನಂದೆಪ್ಪನವರ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

12/02/2022 07:42 pm

Cinque Terre

17.6 K

Cinque Terre

0

ಸಂಬಂಧಿತ ಸುದ್ದಿ