ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಪ್ರೀಮಿಯರ್ ಲೀಗ್ ಹಂಗಾಮಕ್ಕೆ ಕ್ಷಣಗಣನೆ ಶುರುವಾಗಿದ್ದು, ಅನುಭವಿ-ಯುವ ಆಟಗಾರರು ರನ್, ವಿಕೆಟ್ ಮಳೆ ಸುರಿಸಲು ಸಿದ್ಧವಾಗಿದೆ.
ಹೌದು. ಹುಬ್ಬಳ್ಳಿಯ ಆರ್.ಕೆ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಫೆಬ್ರವರಿ ಆರಂಭದಲ್ಲೇ ಕ್ರಿಕೆಟ್ ಹಬ್ಬ ನಡೆಸಲು ಮುಂದಾಗಿದೆ. ಇದೇ 3ರಿಂದ 'ಉಣಕಲ್ ಪ್ರೀಮಿಯರ್ ಲೀಗ್'ನ ಎರಡನೇ ಆವೃತ್ತಿ ಆರಂಭವಾಗಲಿದ್ದು, ಪ್ರತಿದಿನ ನಾಲ್ಕು ಪಂದ್ಯ ನಡೆಯಲಿವೆ. ಹುಬ್ಬಳ್ಳಿಯ ಸಪ್ತಗಿರಿ ಲೇಔಟ್‌ನ ಜೆಕೆ ಸ್ಕೂಲ್ ಸಮೀಪದಲ್ಲಿರುವ ಬಿಜಿ ಗ್ರೌಂಡ್‌ನಲ್ಲಿ ಪಂದ್ಯಗಳು ನಡೆಯಲಿವೆ.
ಈ ಟೂರ್ನಿಗೆ ನಟ ನೆನಪಿರಲಿ ಪ್ರೇಮ್ ಹಾಗೂ ನಟಿ ಬೃಂದಾ ಛಾಯಾ ಶುಭಕೋರಿದ್ದಾರೆ.
ಟಿ-10 ಮಾದರಿಯ ಕ್ರಿಕೆಟ್ ಟೂರ್ನಿ ಇದಾಗಿದ್ದು, ಫೈನಲ್ ಪಂದ್ಯವು ಫೆಬ್ರವರಿ 6ರಂದು ನಡೆಯಲಿದೆ. ಈ ಕ್ರಿಕೆಟ್ ಹಬ್ಬಕ್ಕೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮೀಡಿಯಾ ಪಾರ್ಟನರ್ ಆಗಿದೆ. ಐಪಿಎಲ್ ಮಾದರಿಯಲ್ಲೇ ಆಟಗಾರರನ್ನು ಹರಾಜು ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಒಟ್ಟು 8 ಫ್ರಾಂಚೈಸಿ ತಂಡಗಳಾದ ರಾಯಲ್ ಟೈಗರ್ಸ್, ಬಾಲಾಜಿ ಬ್ಲಾಸ್ಟರ್ಸ್, ಲಖನ್ ಡ್ರಾಗನ್ಸ್, ಆರ್‌ಸಿ ಸೂಪರ್ ಸ್ಟಾರ್ಸ್, ಲಯನ್ ಕಿಂಗ್ಸ್, ಪಿಎಸ್ ರಾಯಲ್ ಚಾಲೆಂಜರ್ಸ್, ಚವಾಣ್ ವಾರಿಯರ್ಸ್ ಹಾಗೂ ತಾಜ್ ಸಿಸಿ ನಡುವೆ ಹಣಾಹಣಿ ನಡೆಯಲಿದೆ.
ಆರ್.ಕೆ. ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ರಮೇಶ್ ಕಾಂಬಳೆ, ಅಧ್ಯಕ್ಷ ಕಿರಣ್ ಪವಾರ ಹಾಗೂ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೋಟಿ ಮಾರ್ಗದರ್ಶನದಲ್ಲಿ ಟೂರ್ನಿ ನಡೆಯಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/02/2022 07:39 am