ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಹೆಚ್ಚಾದರೆ ಸರ್ಕಾರಿ ನೌಕರರ ಕ್ರೀಡಾಕೂಟ ಮುಂದೂಡಲಾಗುವುದು: ಡಿಸಿ

ಧಾರವಾಡ: 2021-22 ನೇ ಸಾಲಿನ ಧಾರವಾಡ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಸಂಘಟಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಿದೆ. ನೌಕರ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ನೋಂದಣಿ ಪ್ರಾರಂಭಿಸಬಹುದು. ಕೋವಿಡ್ ಹೆಚ್ಚಳವಾದರೆ ಕ್ರೀಡಾಕೂಟ ಮೂಂದೂಡಲಾಗುವುದು. ಯಾವುದೇ ಆರ್ಥಿಕ ವೆಚ್ಚ ಮಾಡದೇ ಕ್ರೀಡಾಕೂಟಕ್ಕೆ ಆಂತರಿಕ ಸಿದ್ಧತೆ ಮಾಡಿಕೊಳ್ಳಿ. ಕೋವಿಡ್ ಹೆಚ್ಚಳವಾಗದಿದ್ದರೆ ನಿಗದಿಯಂತೆ ಜನೇವರಿ 27, 28 ಮತ್ತು 29 ರಂದು ಕ್ರೀಡಾಕೂಟ ಆಯೋಜಸಲಾಗುವುದು.

ಜಿಲ್ಲಾ ಪಂಚಾಯತ ಕ್ರೀಡಾ ಘಟಕ ವೆಚ್ಚದಲ್ಲಿ ಐದು ಲಕ್ಷ ಅನುದಾನ ನೀಡಲಾಗುವುದು ಎಂದರು.

ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡ್ರ ಅವರು

ಪ್ರಾಸ್ತಾವಿಕವಾಗಿ ಮಾತನಾಡಿ, ಬರುವ ಜನೇವರಿ 27, 28 ಮತ್ತು 29 ರಂದು ರಾಜ್ಯ ಸರ್ಕಾರಿ ನೌಕರ ಸಂಘದ ಪ್ರಸಕ್ತ ಸಾಲಿನ ಕ್ರೀಡಾಕೂಟ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕ್ರೀಡಾಪಟುಗಳ ನೋಂದಣಿ ಕಾರ್ಯ ಆರಂಭಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕೆಂದರು ಮತ್ತು ಎಲ್ಲ ಇಲಾಖೆಗಳು ಸಹಕಾರ ನೀಡಬೇಕೆಂದು ವಿನಂತಿಸಿದರು.

Edited By : PublicNext Desk
Kshetra Samachara

Kshetra Samachara

04/01/2022 01:34 pm

Cinque Terre

3.34 K

Cinque Terre

0

ಸಂಬಂಧಿತ ಸುದ್ದಿ