ಹುಬ್ಬಳ್ಳಿ : ಇತ್ತಿಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ರೋಲ್ಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ನಡೆದ 37ನೇಯ ರಾಜ್ಯ ಮಟ್ಟದ ಸ್ಕೆಟಿಂಗ್ಸ್ ಸ್ಪರ್ಧೆಯಲ್ಲಿ ನಗರದ ರೋಲ್ಲರ್ ಸ್ಕೇಟಿಂಗ್ ಅಕಾಡೆಮಿಯ ಬಾಲಕಿಯರಿಗೆ ಮೂರು ಸ್ವರ್ಣ ಹಾಗೂ ಒಂದು ಕಂಚಿನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14 ರಿಂದ 17 ವರ್ಷದ ಸ್ಕೇಟಿಂಗ್'ನಲ್ಲಿ "ಜೆ.ಜಿ.ವಾಣಿಜ್ಯ ವಿದ್ಯಾಲಯದ ತ್ರಿಶಾಜಾಡಾಲಾ, ಜೆ.ಎಸ್.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಕಾಲೇಜಿನ ಓಜಲ್ ಎಸ್ ನಲವಡಿ, ದ್ರಾಕ್ಷಾಯಿಣಿ ಕಲ್ಯಾಣ ಪಬ್ಲಿಕ್ ಸ್ಕೂಲ್ ಸಾಕ್ಷಿ ಕಡ್ಡಿ, ಸ್ವರ್ಣ ಪದಕ ಪಡೆದರೇ, ಚನ್ನಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕೃತಿಕಾಸರವಿ ಕಂಚಿನ ಪದಕ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿಯ ರೋಲ್ಲರ್ ಸ್ಕೇಟಿಂಗ್ ಅಕಾಡೆಮಿ ಅಕ್ಷಯ ಸೂರ್ಯವಂಶಿ ತರಭೇತಿ ನೀಡಿದ್ದು, ಮಕ್ಕಳ ಸಾಧನೆ ಕಂಡು ಪಾಲಕರು ಪೋಷಕರು ಖುಷಿ ಪಟ್ಟಿದ್ದು, ಇದೇ ಡಿಸೆಂಬರ್ 14 ರಿಂದ 22 ವರೆಗೂ ನಡೆಯಲಿರುವ 59ನೇ ರಾಷ್ಟ್ರೀಯ ಸ್ಕೇಟಿಂಗ್ ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ ನಡೆಯಲಿದ್ದು ರೋಲ್ಲರ್ ಸ್ಕೇಟಿಂಗ್ ಅಕಾಡೆಮಿ ಕ್ರೀಡಾ ಪಟುಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.
Kshetra Samachara
08/12/2021 05:10 pm