ಹುಬ್ಬಳ್ಳಿ: ಎ-1 ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಮಟ್ಟದ ಮುಕ್ತ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸಂದೀಪ್ ಪೂಜಾರಿಯವರ ಕುಡ್ಲ ಏಜೆನ್ಸಿ ತಂಡ ಮೊದಲ ಬಹುಮಾನವನ್ನು ಪಡೆದುಕೊಂಡಿದೆ.
ಹೌದು.. ವಾಣಿಜ್ಯನಗರಿ ಹುಬ್ಬಳ್ಳಿಯ ಜೆ.ಕೆ.ಸ್ಕೂಲ್ ಪಕ್ಕದಲ್ಲಿರುವ ಕ್ರಿಕೆಟ್ ಗ್ರೌಂಡ್ ನಲ್ಲಿ ಗ್ರಾಮೀಣ ಕಬಡ್ಡಿ ಆಟಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಪಂದ್ಯದಲ್ಲಿ ಹಲವಾರು ಟೀಮ್ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದವು. ಎಲ್ಲ ತಂಡಗಳನ್ನು ಹಿಮ್ಮೆಟ್ಟಿಸಿದ ಸಂದೀಪ್ ಪೂಜಾರಿಯವರ ಕುಡ್ಲ ಏಜೆನ್ಸಿ ತಂಡ ವಿಜಯ ಪತಾಕೆಯನ್ನು ಹಾರಿಸುವ ಮೂಲಕ ಬಹುಮಾನವನ್ನು ಮುಡಿಗೇರಿಸಿಕೊಂಡಿದೆ.
ಒಟ್ಟಿನಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಪ್ರೋ ಕಬಡ್ಡಿ ಪಂದ್ಯವನ್ನು ಆಯೋಜನೆ ಮಾಡಿದ್ದು, ಈ ಪಂದ್ಯದಲ್ಲಿ ಕುಡ್ಲ ಏಜೆನ್ಸಿ ತಂಡ ಮೂವತ್ತು ಸಾವಿರ ರೂಪಾಯಿಗಳ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿದೆ.
Kshetra Samachara
02/11/2021 08:21 pm