ಹುಬ್ಬಳ್ಳಿ : ನಗರದ ಶ್ರೀ ಸದ್ಗರು ಚೆಸ್ ಮಾರ್ಟ್ಜ್ & ಮ್ಯುಜಿಕ್ ಅಕಾಡಮಿ ಆಶ್ರಯದಲ್ಲಿ ಜನವರಿ 31 ರಂದು ಮುಕ್ತ ಹಾಗೂ ವಿವಿಧ ವಿಭಾಗಗಳ ಆಫ್ ಲೈನ್ ಚೆಸ್ ಪಂದ್ಯಾವಳಿ ಏರ್ಪಡಿಸಲಾಗಿದೆ.
ಸ್ಥಳ : ರಾಮಕೃಷ್ಣ ವಿವೇಕಾನಂದ ಆಶ್ರಮ, 3ನೇ ಮೇನ್, 5 ನೇ ಕ್ರಾಸ್, ರಂಭಾಪುರಿ ಕಲ್ಯಾಣ ಮಂಟಪದ ಹತ್ತಿರ ಕಲ್ಯಾಣ ನಗರ ಹುಬ್ಬಳ್ಳಿ. ಸ್ಪರ್ಧಾಳುಗಳು ಬೆಳಗ್ಗೆ 8.30 ಕ್ಕೆ ರಿಪೋರ್ಟ್ ಮಾಡಿಕೊಳ್ಳಬೇಕು.
ಮೊದಲ ವಿಭಾಗ ಮುಕ್ತವಾಗಿದೆ. ಎರಡನೇ ವಿಭಾಗ 10 ವರ್ಷಗಳ ಕೆಳಗಿನವರಿಗಾಗಿ , ಮೂರನೇ ವಿಭಾಗ 13 ವರ್ಷಗಳ ಕೆಳಗಿನವರಿಗಾಗಿ ಹಾಗೂ ನಾಲ್ಕನೆ ವಿಬಾಗ 15 ವರ್ಷಗಳ ಕೆಳಗಿನವರಿಗಾಗಿ ನಡೆಯಲಿದೆ. ಎಲ್ಲ ವಿಭಾಗಗಳ ಸ್ಪರ್ಧೆಗಳು ಪ್ರತ್ಯೇಕವಾಗಿ ಜರುಗಲಿವೆ.
ಮುಕ್ತ ವಿಭಾಗದ ಪ್ರವೇಶ ಶುಲ್ಕ 400 ರೂ ಹಾಗೂ ವಿವಿಧ ವಿಭಾಗಗಳಿಗೆ 300 ರೂ ಪರಮಪೂಜ್ಯ ರಘುವೀರಾನಂದಜಿ ಮಹಾರಾಜ್ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸುವರು. ಪ್ರಥಮ ( 2500 ರೂ ) ದ್ವಿತೀಯ ( 2000 ರೂ ) ತೃತೀಯ (1500 ರೂ ) ಬಹುಮಾನ ವಿಜೇತರಿಗೆ ಟ್ರೋಫಿ ಸಹ ನೀಡಲಾಗುವುದು. ಇನ್ನುಳಿದ ಏಳು ಜನರಿಗೆ ಕೇವಲ ನಗದು ಬಹುಮಾನ ನೀಡಲಾಗುವುದು.
ವಯೋಮಾನದ ವಿಭಾಗದಲ್ಲಿ ಬಾಲಕರಿಗೆ 10 ಹಾಗೂ ಬಾಲಕಿಯರಿಗೆ 10 ಬಹುಮಾನ ನೀಡಲಾಗುವುದು. 10 ವರ್ಷದ ಕೆಳಗಿನ ಮಕ್ಕಳಿಗೆ ಮೆಡೆಲ್ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ವಿಜಯಕುಮಾರ ಹಳ್ಳೂರ (9986990737 ), ಚಂದ್ರಕುಮಾರ್ ( 9902485325) ಅಥವಾ ಅರ್ಚನಾ ನಾಯಕ್ (8762191789, 8431737265) ಇವರನ್ನು ಸಂಪರ್ಕಿಸಬಹುದೆಂದು ಅಕಾಡಮಿ ಮುಖ್ಯಸ್ಥೆ ಅರ್ಚನಾ ನಾಯಕ್ ಕೋರಿದ್ದಾರೆ
Kshetra Samachara
12/01/2021 12:35 pm