ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕುಸ್ತಿಗೆ ತಯಾರಾಗುತ್ತಿದ್ದಾರೆ ಸುಡುಗಾಡು ಸಿದ್ಧರ ಮಕ್ಕಳು

ಧಾರವಾಡ: ಇತ್ತೀಚಿನ ದಿನಗಳಲ್ಲಿ ಜಿಮ್‌ನಂತಹ ತಾಲೀಮು ಪ್ರಕ್ರಿಯೆಗಳು ಬಂದು ಮೊದಲಿದ್ದ ಗರಡಿ ಮನೆಗಳು ನೇಪತ್ಯಕ್ಕೆ ಸರಿದಿವೆ. ಈಗಿನ ಪೀಳಿಗೆಗೆ ಗರಡಿ ಮನೆಗಳು ಅಂದರೆ ಏನು ಎಂಬುದೇ ಗೊತ್ತಿಲ್ಲ. ಇದರ ಮಧ್ಯೆ ಧಾರವಾಡದ ಸುಡುಗಾಡು ಸಿದ್ಧರು ತಮ್ಮ ಮಕ್ಕಳನ್ನು ಕುಸ್ತಿ ಪಂದ್ಯಾವಳಿಗಳಿಗೆ ಹುರಿಗೊಳಿಸುತ್ತಿದ್ದಾರೆ.

ಹೀಗೆ ಕೆಂಪು ಮಣ್ಣಿನಲ್ಲಿ ಮಿಂದೆದ್ದು ತಾಲೀಮು ನಡೆಸುತ್ತಿರುವ ಒಂದೇ ವಯಸ್ಸಿನ ಮಕ್ಕಳು ಧಾರವಾಡದ ಸೋಮೇಶ್ವರದ ಬಳಿ ಇರುವ ಸುಡುಗಾಡು ಸಿದ್ಧೇಶ್ವರನಗರದ ಮಕ್ಕಳು.

ದೀಪಾವಳಿ ಹಬ್ಬದಂದು ಈ ನಗರದಲ್ಲಿ ಮುಕ್ತ ಗರಡಿ ಮನೆಯನ್ನು ಉದ್ಘಾಟಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶಕ ಶರಣು ಅಂಗಡಿ ಅವರು ಈ ಮುಕ್ತ ಗರಡಿ ಮನೆಗೆ ಚಾಲನೆ ನೀಡಿದ್ದು, ಅಲ್ಲಿನ ಮಕ್ಕಳು ಗರಡಿ ಮನೆಯಲ್ಲಿರುವ ತಾಲೀಮು ಪರಿಕರಗಳೊಂದಿಗೆ ತಮ್ಮ ದೇಹವನ್ನು ಹುರಿಗೊಳಿಸಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಬೆಳೆಯುತ್ತಿರುವ ಆಧುನಿಕತೆ ಭರಾಟೆ ಮಧ್ಯೆಯೂ ಧಾರವಾಡದ ಸುಡುಗಾಡು ಸಿದ್ಧರು ತಮ್ಮ ಮಕ್ಕಳಿಗೆ ಹಳೆಯ ಪದ್ಧತಿಯನ್ನೇ ತಿಳಿಸಿ ಅದನ್ನು ಮುಂದುವರೆಸಿಕೊಂಡು ಹೋಗುವಂತೆ ತಿಳಿ ಹೇಳುತ್ತಿರುವುದು ವಿಶೇಷ.

Edited By : Manjunath H D
Kshetra Samachara

Kshetra Samachara

07/11/2021 10:30 am

Cinque Terre

86.26 K

Cinque Terre

2

ಸಂಬಂಧಿತ ಸುದ್ದಿ