ಗದಗ :ಗೇಮ್ ನಲ್ಲಿ ಅಕ್ಷರಶಃ ಅಬ್ಬರಿಸಿರೋ ಹರೀಶ್ ಸೋಮಪ್ಪ ಮುಟಗಾರ, ಮನೆ ವಿಚಾರಕ್ಕೆ ಬಂದ್ರೆ ನಿಸ್ಸಹಾಯಕ.. ಅಂದ್ಹಾಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರೋ ಈ ಪ್ರತಿಭೆ ಗದಗ ಬೆಟಗೇರಿಯ ಗಾಂಧಿ ಬಡಾವಣೆ ನಿವಾಸಿ..ಸುಮಾರು 40 ವರ್ಷದಿಂದ ಇದೇ ಏರಿಯಾದಲ್ಲಿ ಮುಟುಗಾರ ಕುಟುಂಬ ವಾಸವಿದೆ.
ಸ್ವಂತ ಸೂರಿಲ್ದೆ ರಸ್ತೆ ಪಕ್ಕದಲ್ಲೇ ಕಚ್ಚಾ ಮನೆಯೇ ಆಸರೆ. ತಂದೆ ಸೋಮಪ್ಪ ಇಪತ್ತು ವರ್ಷದ ಹಿಂದೆ ಅಪಘಾತದಲ್ಲಿ ಕಾಲು ಹೋಗಿದೆ, ತಾಯಿ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡ್ತಿದಾರೆ. ಅಣ್ಣ ಖಾಸಗಿ ಕಂಪನಿಯಲ್ಲಿ ದುಡೀತಿದ್ದು ಅಷ್ಟಿಷ್ಟು ಸಹಾಯ ಆಗ್ತಿದೆ. ಕುಟುಂಬದ ಪರಿಸ್ಥಿತಿ ಹೀಗಿದ್ರೂ 23 ವರ್ಷದ ಹರೀಶ್ ದೇಶಕ್ಕಾಗಿ ಮತ್ತಷ್ಟು ಚಿನ್ನ ಗೆಲ್ಬೇಕು ಅನ್ನೋ ಉಮೇದಿಯಲ್ಲಿದ್ದಾರೆ. ಆದ್ರ ಆತನಿಗೆ ಮನೆಯದ್ದೇ ಚಿಂತೆ, ಸತತ ಮಳೆಯಾಗ್ತಿರೋದ್ರಿಂದ ಅದ್ಯಾವಾಗ ಮನೆ ಬೀಳುತ್ತೋ ಅನ್ನೋ ಆತಂಕ.. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ನನ್ನ ಪ್ರತಿಭೆ ಗುರುತಿಸಿ ಮನೆ ಮಂಜೂರು ಮಾಡಿ ಅಂತಿದಾರೆ ಹರೀಶ..
ಬಾಲ್ಯದಿಂದ್ಲೇ ಹಾಕಿ ಆಟದ ಹುಚ್ಚು ಹಚ್ಚಿಕೊಂಡ ಹರೀಶ್, ಶಾಲಾ ವಿಭಾಗದಲ್ಲೇ ನ್ಯಾಷನಲ್ ಲೆವೆಲ್ ಜ್ಯೂನಿಯರ್ ಹಾಕಿ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಿದ್ರು.ಅಲ್ದೆ ಏಳು ವರ್ಷ ನ್ಯಾಷನಲ್ ಹಾಕಿ ಟೀಮ್ ನ ಸದಸ್ಯರಾಗಿದಾರೆ 2016 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಅಂತರಾಷ್ಟ್ರೀಯ ಹಾಕಿ ಚಾಂಪಿಯನ್ ಶಿಪ್ ಟೀಮ್ ನಲ್ಲಿ ಹರೀಶ್ ಇದ್ರು. ರಾಷ್ಟ್ರೀಯ ಕೋಚಿಂಗ್ ಕ್ಯಾಂಪ್ ನಲ್ಲೂ ಹರೀಶ್ ಭಾಗಿಯಾಗಿದಾರೆ..ಇತ್ತೀಚೆಗೆ ಖೇಲೊ ಇಂಡಿಯಾ ಕ್ರೀಡಾ ಕೂಟದಲ್ಲಿ ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿ ಟೀಮ್ ಗೆ ಆಟವಾಡಿ ಹೆಚ್ಚು ಗೋಲ್ ಗಳಿಸಿದಾರೆ.. ಇಷ್ಟೆಲ್ಲ ಸಾಧನೆ ಮಾಡಿರೋ ಹರೀಶಗೆ ಸರಿಯಾದ ಸೂರಿಲ್ಲ.
ರಾಷ್ಟ್ರೀಯ ಕ್ರೀಡೆಯ ಕ್ರೀಡಾ ಪಟುಗಳಿಗೆ ಸರ್ಕಾರ ಸೂಕ್ತ ಸೂರು ಒದಗಿಸ್ಬೇಕು, ಹರೀಶ ತನ್ನ ಮನೆಯ ಚಿಂತೆ ಇಲ್ದೆ ಸಂತೋಷದಿಂದ ದೇಶಕ್ಕಾಗಿ ಆಡುವಂತಾಗ್ಬೇಕು.. ಸೂರು ನೀಡುವ ಮೂಲಕ ಹರೀಶಗೆ ಹಾಗೂ ರಾಷ್ಟ್ರೀಯ ಕ್ರೀಡೆಗೆ ಗೌರವ ಸಲ್ಲಿಸ್ಬೇಕಿದೆ.
Kshetra Samachara
23/10/2021 06:47 pm