ಪಬ್ಲಿಕ್ ನೆಕ್ಸ್ಟ್ ವಿಶೇಷ-
ಈರಣ್ಣ ವಾಲಿಕಾರ
ಹುಬ್ಬಳ್ಳಿ: ಹೀಗೆ ಪವರ್ ಲಿಫ್ಟ್ ಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಈ ಯುವತಿಯ ಹೆಸರು ಸನಾ ಮಳಗಿ. ಇವರು ನಗರದ ಹಳೇ ಹುಬ್ಬಳ್ಳಿಯ ನವ ಅಯೋದ್ಯನಗರದ ನಿವಾಸಿ. ಈ ಯುವತಿ ಪುರುಷರು ಮಾಡಲಾರದ ಸಾಧನೆಯನ್ನು ಮಾಡುತ್ತಿದ್ದಾಳೆ.
ಘನ ಗಾತ್ರದ ಭಾರ ಎತ್ತಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಇಂತಹ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಪವರ್ಲಿಫ್ಟಿಂಗ್ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಉತ್ತರ ಕರ್ನಾಟಕದ ಮೊದಲ ಯುವತಿ ಎಂಬ ಶ್ರೇಯಕ್ಕೂ ಇವರು ಪಾತ್ರರಾಗಿದ್ದು. ಅಂದಿನಿಂದ ಇಂದಿನವರೆಗೂ ಸನಾ ಪವರ್ಲಿಫ್ಟಿಂಗ್ನಲ್ಲಿ ತಮ್ಮದೇ ಆದ ದಾಖಲೆ ಸೃಷ್ಟಿಸುತ್ತ ಮುನ್ನುಗ್ಗುತ್ತಿದ್ದಾರೆ.
ಪವರ್ಲಿಫ್ಟಿಂಗ್ ಅಸೋಸಿಯೇಶನ್ ಆಯೋಜಿಸುವ ರಾಜ್ಯಮಟ್ಟದ ಪವರ್ಲಿಫ್ಟಿಂಗ್ 72 ಕೆ.ಜಿ ವಿಭಾಗದಲ್ಲಿ ಸತತ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆಯುವ ಮೂಲಕ ಸ್ಟ್ರಾಂಗ್ ವುಮನ್ ಆಗಿದ್ದಾರೆ. ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಶನ್ ಆಯೋಜಿಸುವ ರಾಜ್ಯಮಟ್ಟದ ಪವರ್ಲಿಫ್ಟಿಂಗ್ನಲ್ಲಿ ಸ್ಕ್ವಾಟ್ 202.5 ಕೆಜಿ ವಿಶೇಷ ಸಾಧನೆ ಮಾಡುವ ಮೂಲಕ, ಉತ್ತರ ಕರ್ನಾಟಕದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದು ಕಲಿಸಿದ ಕೋಚ್ ಗೆ ಸಂತಸ ತಂದಿದೆ..
ಒಟ್ಟಿನಲ್ಲಿ ಸನಾ ಮಳಗಿಗೆ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆಲ್ಲುವ ಬಹುದೊಡ್ಡ ಕನಸಿದೆ. ಇವರ ಕನಸು ನನಸಾಗಿಸಿಕೊಳ್ಳಲು ಪ್ರೋತ್ಸಾಹದ ಜೊತೆಗೆ ಸಹಾಯಧನದ ಅವಶ್ಯಕತೆ ಇದೆ. ನೆರವು ನೀಡಬಯಸುವವರು ಈ ಅಕೌಂಟರ್ ಗೆ ಧನಸಹಾಯ ಮಾಡಬಹುದು..
Sana Mehaboobsab Malagi
A/c no: 32280734385
Ifsc :SBIN0001934
Coach no:7204616830
Waseem malagi
Kshetra Samachara
03/02/2021 01:24 pm