ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಆಧುನಿಕತೆ ಭರಾಟೆಯಲ್ಲಿ ಮಕ್ಕಳು ಪಬ್ಜಿ, ಕ್ಯಾಂಡಿ ಕ್ರಷ್‌ನಂತಹ ಆಟಕ್ಕೆ ಮರುಳಾಗಿ ಮೊಬೈಲ್ ದಾಸರಾಗಿದ್ದಾರೆ. ಮೊಬೈಲ್ ಆಟಗಳು ಬರುವುದಕ್ಕಿಂತ ಮುಂಚೆ ಹೆಚ್ಚಾಗಿ ಆಡಲ್ಪಡುತ್ತಿದ್ದ ಗೋಲಿ, ಲಗೋರಿ, ಚಿನ್ನಿದಾಂಡು, ಬುಗುರಿ ಆಟಗಳು ಕಣ್ಮರೆಯಾಗುತ್ತಿವೆ. ಆದರೆ, ಮಕ್ಕಳ ದಿನಾಚರಣೆ ಅಂಗವಾಗಿ ಧಾರವಾಡದ ನಿವೇದಿತಾ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ದೇಸಿ ಆಟಗಳನ್ನು ಆಡಿಸಿ ಅವುಗಳ ನೆನಪು ಮರುಕಳಿಸುವಂತೆ ಮಾಡಲಾಗಿದೆ.
ಹೌದು! ನಿನ್ನೆಯಷ್ಟೆ ಮಕ್ಕಳ ದಿನಾಚರಣೆ ಕಾರ್ಯಕ್ರಮ ಮುಗಿದಿದೆ. ಅದರ ಅಂಗವಾಗಿ ನಿವೇದಿತಾ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗೋಲಿ, ಲಗೋರಿ, ಕುಂಟಾಪಿಲ್ಲೆ ಸೇರಿದಂತೆ ಇತ್ಯಾದಿ ದೇಸಿ ಆಟಗಳನ್ನು ಆಡಿಸಿ ಖುಷಿಪಡಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿದ್ದವು. ಈಗ ಪುನರಾರಂಭಗೊಂಡಿದ್ದು, ಪಠ್ಯದ ಜೊತೆಗೆ ದೇಸಿಯ ಪಠ್ಯೇತರ ಚಟುವಟಿಕೆಗಳೂ ನಡೆಯುತ್ತಿರುವುದರಿಂದ ಮಕ್ಕಳು ಖುಷಿಯಾಗಿದ್ದಾರೆ.
ಒಟ್ಟಾರೆ ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ದೇಸಿ ಆಟಗಳನ್ನು ಆಡಿಸಿ, ನೇಪತ್ಯಕ್ಕೆ ಸರಿಯುತ್ತಿರುವ ಆಟಗಳನ್ನು ಮತ್ತೆ ಮಕ್ಕಳಿಗೆ ಪರಿಚಯ ಮಾಡಿಕೊಡುವ ಕೆಲಸ ನಿವೇದಿತಾ ಶಾಲೆಯಿಂದ ನಡೆದಿದೆ. ಈ ಆಟಗಳನ್ನು ಆಡಿ ಮಕ್ಕಳೂ ಖುಷಿಪಟ್ಟಿದ್ದಂತೂ ಸುಳ್ಳಲ್ಲ.
Kshetra Samachara
15/11/2021 05:38 pm