ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತೋಳು- ತೊಡೆ ತಟ್ಟಿ ಮದಗಜಗಳಂತೆ ಕಾದಾಡಿದ ಮಲ್ಲರು; ಹರ್ಷ ಚಿತ್ತ ಪ್ರೇಕ್ಷಕರು

ಧಾರವಾಡ: ತೋಳು- ತೊಡೆ ತಟ್ಟಿ ಮದಗಜಗಳಂತೆ ಕಾದಾಡಿದ ಮಲ್ಲರು; ಹರ್ಷ ಚಿತ್ತ ಪ್ರೇಕ್ಷಕರು

ಧಾರವಾಡ: ಶ್ರೀ ವಿರುಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಜಂಗೀ ಕುಸ್ತಿ ಪಂದ್ಯಾವಳಿ ಜರುಗಿತು.

ರಥೋತ್ಸವ ಆದ ಮಾರನೇ ದಿನವೇ ಪ್ರತಿವರ್ಷ ಸಾಂಪ್ರದಾಯಿಕವಾಗಿ ಈ ಕುಸ್ತಿ ಪಂದ್ಯಾವಳಿ ನಡೆಯುತ್ತವೆ. ಕೊರೊನಾ ನಂತರ ಇದೇ ಮೊದಲ ಬಾರಿಗೆ ಮತ್ತೆ ಕುಸ್ತಿ ಸ್ಪರ್ಧೆ ಹುರುಪು ಪಡೆದುಕೊಂಡಿದ್ದವು.

ಗುರುವಾರ ಹಾಗೂ ಶುಕ್ರವಾರ ಚಿಣ್ಣರ ಕುಸ್ತಿಗಳು ನಡೆದು ಗಮನ ಸೆಳೆದವು. ಕೊನೆ ದಿನವಾದ ಶನಿವಾರ ಬೇರೆ ಬೇರೆ ಊರುಗಳಿಂದ ಬಂದ ಪೈಲ್ವಾನರು ಸೆಡ್ಡು ಹೊಡೆದು ಅಖಾಡಕ್ಕೆ ಇಳಿದಿದ್ದರು. ಬೈಲಹೊಂಗಲ, ಧಾರವಾಡ, ಕೊಲ್ಲಾಪುರಗಳಿಂದಲೂ ಬಂದ ಮಲ್ಲರು ಕುಸ್ತಿ ಕಣಕ್ಕೆ ಇಳಿದಿದ್ದರು.

ಇಂದು ನಡೆದ ಮಲ್ಲಯುದ್ಧದಲ್ಲಿ ಗೆದ್ದ ಮಲ್ಲರಿಗೆ ದೇವಸ್ಥಾನ ಕಮಿಟಿಯವರು ನಗದು ಬಹುಮಾನ ನೀಡಿ ಸನ್ಮಾನಿಸಿದರು.

Edited By : Nagesh Gaonkar
Kshetra Samachara

Kshetra Samachara

09/04/2022 10:29 pm

Cinque Terre

30.85 K

Cinque Terre

0

ಸಂಬಂಧಿತ ಸುದ್ದಿ