ಹುಬ್ಬಳ್ಳಿ: ವಾಹನದ ಬಗ್ಗೆ ಎಲ್ಲರಲ್ಲಿಯೂ ಒಂದು ಕ್ರೇಜ್ ಇದ್ದೇ ಇರುತ್ತದೆ. ಆದರೆ ಹುಬ್ಬಳ್ಳಿಯ ಉದ್ಯಮಿಯೊಬ್ಬರ ವಾಹನದ ಕ್ರೇಜ್ ನೋಡಿದರೇ ನಿಜಕ್ಕೂ ನೀವು ಅಚ್ಚರಿ ಪಡುವುದು ಖಂಡಿತ. ಹಾಗಿದ್ದರೇ ಯಾರು ಆ ಉದ್ಯಮಿಗಳು...? ಅವರ ವಾಹನದ ಹೈಟೆಕ್ ಕ್ರೇಜ್ ಏನು ಅಂತೀರಾ ಈ ಸ್ಟೋರಿ ನೋಡಿ..
ಹೀಗೆ ಬೃಹತ್ ಗಾತ್ರದ ವಾಹನ.. ಡೋರ್ ತೆಗೆದು ಒಳಗೆ ಹೋದರೆ ಸಾಕು ಐಷಾರಾಮಿ ಆಸನ..ಮೀಟಿಂಗ್ ಮಾಡಲು, ನಿದ್ರಿಸಲು, ಸಾಕಷ್ಟು ಪ್ರಮಾಣದಲ್ಲಿ ಜಾಗ. ಪ್ರಯಾಣದ ಆಯಾಸವನ್ನು ಕ್ಷಣಾರ್ಧದಲ್ಲಿಯೇ ದೂರ ಮಾಡುವ ವಾತಾವರಣ ಹೊಂದಿರುವ ಈ ವಾಹನವನ್ನು ಒಮ್ಮೆ ಸರಿಯಾಗಿ ನೋಡಿ. ಇದುವೆ ಹುಬ್ಬಳ್ಳಿ ಉದ್ಯಮಿಯೊಬ್ಬರ ವಾಹನ ಕ್ರೇಜ್. ಹೌದು... ರೈಲ್ವೆ ಗುತ್ತಿಗೆದಾರರಾದ ಡಾ. ವಿ.ಎಸ್.ವಿ ಪ್ರಸಾದ ಅವರು ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡವರು. ಅದೇ ರೀತಿಯಲ್ಲಿ ಸೇವಾ ಮನೋಭಾವ ಹೊಂದಿರುವ ಇವರು ಈಗ ವಿನೂತನ ಕಾರ್ಯದ ಮೂಲಕ ತಮ್ಮ ಅಭಿರುಚಿಯನ್ನು ವ್ಯಕ್ತಪಡಿಸಿದ್ದಾರೆ. ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಡಾ.ವಿ.ಎಸ್.ವಿ ಪ್ರಸಾದ ಅವರು ಕ್ಯಾರ್ವಾನ್ ಬಸ್ ಒಂದನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಂದ ಲೋಕಾರ್ಪಣೆಗೊಳಿಸಿದ್ದಾರೆ. ಈ ಬಸ್‌ನ ವೈಶಿಷ್ಟ್ಯವನ್ನು ನೋಡಿದರೇ ನಿಜಕ್ಕೂ ಮನಸಿಗೆ ಮುದ ನೀಡುವ ಹಿತಕರ ಹಾಗೂ ಸುರಕ್ಷಿತ ಪ್ರಯಾಣ ಇದರಲ್ಲಿ ಸಿಗಲಿದೆ. ಹಾಗಿದ್ದರೇ ಈ ಬಸ್ಸಿನ ವೈಶಿಷ್ಟ್ಯತೆಯನ್ನು ಇದನ್ನು ತಯಾರಿಸಿರುವ ಜಗದೀಶ ಹಿರೇಮಠ ಏನು ಹೇಳ್ತಾರೆ ಕೇಳಿ.
ಇನ್ನೂ ಐಶಾರಾಮಿ ಬೆಡ್, ಸಿಸಿಟಿವಿಯ ಕಣ್ಗಾವಲು, ಅಡುಗೆ ಮಾಡಲು ಸುಸಜ್ಜಿತ ವ್ಯವಸ್ಥೆ, ಬಾತ್ ರೂಮ್, ಟಾಯ್ಲೆಟ್ ಸೇರಿದಂತೆ ಒಂದು ಫ್ಯಾಮಿಲಿಗೆ ಅವಶ್ಯಕತೆ ಇರುವ ಹಾಗೂ ಪ್ರಯಾಣಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ಇದರಲ್ಲಿ ಕಲ್ಪಿಸಿ ವಿನ್ಯಾಸಗೊಳಿಸಲಾಗಿದೆ. ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ನೇತೃತ್ವದಲ್ಲಿ ಡಾ.ವಿ.ಎಸ್.ವಿ ಪ್ರಸಾದ ಅವರಿಗೆ ಈ ಬಸ್ ಹಸ್ತಾಂತರಿಸಲಾಗಿದೆ. ಕ್ಯಾರ್ವಾನ್ ಬಸ್ ವೀಕ್ಷಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಫ್ಯಾಮಿಲಿ ಹಾಗೂ ಸ್ನೇಹಿತರೊಂದಿಗೆ ಪ್ರಯಾಣ ಮಾಡಲು ಹೇಳಿ ಮಾಡಿಸಿರುವ ಬಸ್ ಆಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಿನಲ್ಲಿ ಡಾ. ವಿ.ಎಸ್.ವಿ ಪ್ರಸಾದ್ ವಿಭಿನ್ನ ಹಾಗೂ ವಿನೂತನ ರೀತಿಯ ವಾಹನದ ಅಭಿರುಚಿ ಹೊಂದಿದ್ದು, ಸ್ವರ್ಣ ಗ್ರೂಪ್ ಆಫ್ ಕಂಪನಿಯ ಕುಟುಂಬಕ್ಕೆ ಹೊಸ ಅತಿಥಿಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ನಿಜಕ್ಕೂ ಈ ವಾಹನವನ್ನೊಮ್ಮೆ ನೋಡಿ ಒಂದು ಜರ್ನಿ ಮಾಡಲೇಬೇಕು ಅನಿಸುವುದಂತೂ ಖಂಡಿತ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/05/2022 08:27 pm