ಹುಬ್ಬಳ್ಳಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಐಟಿ ಉದ್ಯಮಗಳು, ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರ ಪ್ರವರ್ತಿತ ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡರ್ಡ್ (ಬೈಟ್ಸ್) ಆಶ್ರಯದಲ್ಲಿ 13ನೇ ಆವೃತ್ತಿಯ ಟಿಸಿಎಸ್ ಟೆಕ್‌ಬೈಟ್ಸ್ ಇಂಜಿನಿಯರಿಂಗ್ ಐಟಿ ಕ್ವಿಜ್‌ಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ರಸಪ್ರಶ್ನೆ ಸ್ಪರ್ಧೆ ರಾಜ್ಯದ ಎಲ್ಲ ಶಾಖೆಗಳ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ (ಬಿಇ/ ಬಿಟೆಕ್) ಮುಕ್ತವಾಗಿರುತ್ತದೆ. ಪ್ರತಿ ಸಂಸ್ಥೆಯು ಪ್ರಾದೇಶಿಕ ಫೈನಲ್‌ಗೆ 20 ವಿದ್ಯಾರ್ಥಿಗಳನ್ನು ಕಳುಹಿಸಬಹುದು. ಆಯಾ ಸಂಸ್ಥೆಗಳು ನೋಂದಣಿಗಳನ್ನು ಫೆ. 23ರೊಳಗೆ bitesitquizdgmail.com ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 080-41235889 ಸಂಖ್ಯೆ ಸಂಪರ್ಕಿಸಬಹುದು. ಈ ವರ್ಷದ ಸ್ಪರ್ಧೆಯು ಆನ್‌ಲೈನ್ ಪರೀಕ್ಷೆಗಳು ಮತ್ತು ವರ್ಚುವಲ್ ರಸಪ್ರಶ್ನೆ ಕಾರ್ಯಕ್ರಮಗಳ ಸಂಯೋಜನೆಯಾಗಿದೆ. ಪೂರ್ವಭಾವಿ ಆನ್‌ಲೈನ್ ಪರೀಕ್ಷೆ ಮಾ 6ರಂದು ನಡೆಯಲಿದೆ. ಮಾ. 15ರಂದು ಹುಬ್ಬಳ್ಳಿ, ಕಲಬುರಗಿ, ಮೈಸೂರು, ಮಾ. 16ರಂದು ಮಂಗಳೂರು, ತುಮಕೂರು, ಬೆಂಗಳೂರಿನ ಪ್ರಾದೇಶಿಕ ಸುತ್ತಿನ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಪ್ರಥಮ 12 ಸಾವಿರ, ದ್ವಿತೀಯ 10 ಸಾವಿರ ರೂ. ಮೌಲ್ಯದ ಉಡುಗೊರೆ ವೋಚರ್ ಬಹುಮಾನ, ಮಾ. 29ರಂದು ನಡೆಯಲಿರುವ ರಾಜ್ಯ ಫೈನಲ್‌ನಲ್ಲಿ ಪ್ರಥಮ 85 ಸಾವಿರ ಮತ್ತು ದ್ವಿತೀಯ 50 ಸಾವಿರ ರೂ. ಬಹುಮಾನ ನೀಡಲಾಗುತ್ತದೆ.
ಡಿಜಿಟಲ್, ಕ್ಲಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಯಾಂತ್ರೀಕೃತಗೊಂಡ ಬಯೋಮೆಟ್ರಿಕ್ಸ್, ಚಲನಶೀಲತೆ, ರೊಬೊಟಿಕ್ಸ್, ಟೆಲಿಕಾಂ, ಸಾಮಾಜಿಕ ಮಾಧ್ಯಮ, ಐಟಿ ಇತಿಹಾಸ ಮತ್ತು ಶಿಕ್ಷಣ, ಮನರಂಜನೆ, ಪುಸ್ತಕಗಳು, ಮಲ್ಟಿಮೀಡಿಯಾದಂತಹ ಐಟಿ ಪ್ರಭಾವ ಬೀರಿದ ಕ್ಷೇತ್ರಗಳು, ಸಂಗೀತ, ಚಲನಚಿತ್ರಗಳು, ಇಂಟರ್‌ನೆಟ್, ಬ್ಯಾಂಕಿಂಗ್, ಜಾಹೀರಾತು, ಕ್ರೀಡೆ, ಗೇಮಿಂಗ್, ಸಾಮಾಜಿಕ ನೆಟ್‌ವರ್ಕಿಂಗ್, ಸೆಲ್ ಫೋನ್ ಇತ್ಯಾದಿ ಕ್ಷೇತ್ರಗಳ ಕೇಂದ್ರೀಕೃತ ವಿಷಯವನ್ನು ಸ್ಪರ್ಧೆಯು ಒಳಗೊಂಡಿರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ www.bites.org.in ಜಾಲತಾಣಕ್ಕೆ ಭೇಟಿ ನೀಡಬಹುದು.
Kshetra Samachara
14/02/2022 10:02 am