ಹುಬ್ಬಳ್ಳಿ: ರಾಜ್ಯದ ಗಮನ ಸೆಳೆದ ನಗರದ ರಾಣಿ ಚನ್ನಮ್ಮ ಮೈದಾನದ ಗಣೇಶನ ವಿಸರ್ಜನೆ ಕಾರ್ಯಕ್ರಮ ಇಂದು ಜರುಗಲಿದ್ದು. ಈ ಹಿನ್ನೆಲೆ ಡೊಳ್ಳು ಕುಣಿತ, ಗೊಂಬೆ ಕುಣಿತ, ಭಜನೆ ನೋಡುಗರ ಗಮನ ಸೆಳೆಯಿತು.
ವಿವಿಧ ಹಿಂದೂಪರ ಸಂಘಟನೆಗಳಿಂದ ಗಜಾನನನಿಗೆ ಪೂಜೆ ಸಲ್ಲಿಸಲಾಯ್ತು. ರಾಣಿ ಚನ್ನಮ್ಮ ಮೈದಾನದ ಗಣೇಶನ ಮುಂದೆ ಅದ್ಧೂರಿ ಕಲಾ ಪ್ರದರ್ಶನ ನಡೆಯಿತು. ಇನ್ನೂ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಜಾನನ ದರ್ಶನ ಪಡೆದು ಭಗವಾಧ್ವಜ ಹಾರಿಸಿ ಸಂಭ್ರಮಿಸಿದ್ರು.
ಪರ-ವಿರೋಧದ ನಡುವೆಯೂ ನಗರದ ರಾಣಿ ಚೆನ್ನಮ್ಮ ಮೈದಾನದಲ್ಲಿ ಗಜಾನನ ಉತ್ಸವ ಮಂಡಳಿಯಿಂದ ಗಜಾನನ ಪ್ರತಿಷ್ಠಾಪನೆ ಮಾಡಿದ್ದು, ರಾಜ್ಯದ ಚಿತ್ತವೇ ಈ ವಿಘ್ನೇಶ್ವರನತ್ತ ನೆಟ್ಟಿತ್ತು. ಇಂದಿಗೆ ಮೂರು ದಿನದ ಬಳಿಕ ಗಣೇಶನ ವಿಸರ್ಜನೆ ಕಾರ್ಯ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳ ವತಿಯಿಂದ ನೂರಾರು ಆರ್.ಎ.ಎಫ್ ಹಾಗೂ ಪೊಲೀಸರ ಬಿಗಿ ಭದ್ರತೆಯೊಂದಿಗೆ ಜರುಗಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/09/2022 12:53 pm