ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಬೆಂಗೇರಿಯಲ್ಲಿ ಅದ್ಧೂರಿ ಮೋಹರಂ ಆಚರಣೆ

ಹುಬ್ಬಳ್ಳಿ : ಹಿಂದೂ- ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಮೊಹರಂ ಹಬ್ಬವನ್ನು, ಹುಬ್ಬಳ್ಳಿಯ ಬೆಂಗೇರಿಯ ಹಟೇಲ ಭಾಷಾ ದರ್ಗಾ ಜುಮ್ಮಾ ಮಜೀದಲ್ಲಿ ವಿಶಿಷ್ಠವಾಗಿ ಅದ್ಧೂರಿಯಾಗಿ ಹಿಂದೂ ಮುಸ್ಲಿಂ ಸಮುದಾಯದ ಜನರು ಆಚರಣೆ ಮಾಡಿದರು.

ಸರ್ವ ಧರ್ಮೀಯರು ಆಚರಿಸುವ ಮೊಹರಂ ಹಬ್ಬವನ್ನು, ಸುಮಾರು ವರ್ಷದ ಇತಿಹಾಸ ಹೊಂದಿರುವ ಬೆಂಗೇರಿಯ ಮೋಹರಂ ಹಬ್ಬವನ್ನು, ಇಂದಿಗೂ ಕೂಡ ಎಲ್ಲ ಹಿಂದೂ ಮುಸ್ಲಿಂ ಭಾಂದವರು ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ.

ಯುವಕರು ಹಲಗೆ ವಾದ ಹಾಡಿಗೆ ತಕ್ಕಂತೆ ಹೆಜ್ಜೆ ಕುಣಿತ ಹಾಕುತ್ತಾ ಓಣಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಕತ್ತಲ ರಾತ್ರಿಯ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಮಸೀದಿಗೆ ತೆರಳಿ ಲಾಡಿಗಳನ್ನು ಧರಿಸಿ ಫಕೀರರಾಗಿ ದೇವರಿಗೆ ಸಕ್ಕರೆ ಅರ್ಪಿಸಿದರು.

ಬೆಳಗಿನ ಜಾವ ಪೀರಲ ದೇವರು ಅಗ್ನಿಪ್ರವೇಶ ಮಾಡಿ ಹೇಳಿಕೆಗಳನ್ನು ನೀಡಿದವು.

ಇಸ್ಲಾಂ ಧರ್ಮದ ಪ್ರವಾದಿಗಳಾಗಿದ್ದ ಹಸನ್ ಮತ್ತು ಹುಸೇನ್ ಅವರ ಹತ್ಯೆಯ ಪ್ರತೀಕವಾಗಿ ಆಚರಿಸಲಾಗುವ ಮೊಹರಂ ಹಬ್ಬವನ್ನು, ಬೆಂಗೇರಿಯಲ್ಲಿ ಸರ್ವ ಧರ್ಮೀಯರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಗ್ರಾಮಗಳ ಮಸೀದಿಗಳಲ್ಲಿ ಪೀರಲ ದೇವರನ್ನು ಇರಿಸಿ ಪೂಜಿಸಲಾಯಿತು.

Edited By :
Kshetra Samachara

Kshetra Samachara

09/08/2022 04:07 pm

Cinque Terre

16.31 K

Cinque Terre

1

ಸಂಬಂಧಿತ ಸುದ್ದಿ