ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ ಮಕವಾಡದ ಅನ್ನದಾನೇಶ್ವರ ಮಠದ ಶಿಲಾ ಮಂಟಪಕ್ಕೆ 5 ಲಕ್ಷ ರೂ. ಕಾಣಿಕೆ

ಅಣ್ಣಿಗೇರಿ: ತಾಲೂಕಿನ ಸುಕ್ಷೇತ್ರ ಮಕವಾಡ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದ ಜೀರ್ಣೋದ್ಧಾರದ ಕೆಲಸ ಈಗಾಗಲೇ ಭರದಿಂದ ಸಾಗಿದ್ದು, ಭಕ್ತರು ಈ ಜೀರ್ಣೋದ್ದಾರ ಕೆಲಸಗಳಿಗೆ ತನುಮನದಿಂದ ದಾನ ಮಾಡುತ್ತಿದ್ದಾರೆ. ಈ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಅವರು ಸಹ ಶ್ರೀಮಠದ ಬಾಲಲೀಲಾ ಅನ್ನದಾನ ಶಿವಯೋಗಿಗಳವರ ಕರ್ತೃ ಗದ್ದುಗೆಯ ಶಿಲಾಮಂಟಪಕ್ಕೆ 5 ಲಕ್ಷ ರೂಪಾಯಿಗಳನ್ನು ಪ್ರಸಾದ ರೂಪದಲ್ಲಿ ಕಾಣಿಕೆಯನ್ನು ಪ್ರಪ್ರಥಮವಾಗಿ ನೀಡಿ ಕಾಮಗಾರಿಕೆ ಚಾಲನೆ ನೀಡಿದರು.

ಈ ವೇಳೆ ಅಭಿನವ ಮೃತ್ಯುಂಜಯ ಶ್ರೀಗಳು ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಶ್ರೀ ವೀರೇಂದ್ರ ಹೆಗಡೆ ಅವರ ಮಣಕವಾಡದ ಗ್ರಾಮದ ಜೊತೆ ಬಾಳ ಪ್ರೀತಿ ವಿಶ್ವಾಸ ಇಟ್ಟು ಕೊಂಡಿದ್ದಾರೆ. ಈಗಾಗಲೇ ಪೂಜ್ಯರು ಮಠದಲ್ಲಿ ನಿರ್ಮಾಣವಾದ ಕಟ್ಟಡಕ್ಕೆ ಕಲ್ಯಾಣ ಮಂಟಪಕ್ಕೆ ಹಾಗೂ ಗ್ರಾಮಕ್ಕೆ ಕೆರೆಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಹಾಯ ಮಾಡಿದ್ದಾರೆ. ಈಗ ಮತ್ತೆ ಮಠದ ಕರ್ತೃ ಗದ್ದುಗೆ ಶಿಲಾಮಂಟಪ ನಿರ್ಮಾಣಕ್ಕಾಗಿ 5 ಲಕ್ಷ ಹಣ ನೀಡಿದ್ದಾರೆ. ಪೂಜ್ಯರಿಗೆ ನಮ್ಮ ಮಠದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

Edited By : Vijay Kumar
Kshetra Samachara

Kshetra Samachara

20/06/2022 08:30 am

Cinque Terre

3.64 K

Cinque Terre

2

ಸಂಬಂಧಿತ ಸುದ್ದಿ