ಕುಂದಗೋಳ: ಯುಗಾದಿ ಹಬ್ಬದ ಸಂಭ್ರಮ ಕಳೆಯಿತು ಎನ್ನುವುದರ ಒಳಗೆ ಪ್ರತಿ ಗ್ರಾಮ ಗ್ರಾಮಗಳಲ್ಲೂ ಆ ಗ್ರಾಮದ ಆರಾಧ್ಯದೇವರ ಜಾತ್ರಾ ಮಹೋತ್ಸವಗಳು ಆರಂಭವಾಗಿವೆ.
ಅದರಂತೆ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ನಂದೀಶ್ವರನ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಜೋರಾಗಿಯೆ ನಡೆದಿವೆ. ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣ ಕಳೆದುಕೊಂಡ ಜಾತ್ರಾ ಸಂತೋಷ ಸಡಗರವನ್ನು ಪುನಃ ಪಡೆಯಲು ಯರೇಬೂದಿಹಾಳ ಗ್ರಾಮಸ್ಥರು ಜಾತ್ರೆಯ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ನಂದೀಶ್ವರ ಜಾತ್ರೆ ಅಂಗವಾಗಿ ದೇವಸ್ಥಾನ ರಥೋತ್ಸವಕ್ಕೆ ಬಣ್ಣ ಬಳಿದು ಶೃಂಗರಿಸಿ ಸಕಲ ವಾಧ್ಯಮೇಳಗಳ ಜೊತೆ ಕಳಸಾರೋಹಣ ಸಹ ನೆರವೇರಿಸಲಾಗಿದೆ.
ಜಾತ್ರೆಯಲ್ಲಿ ಸಾಮೂಹಿಕ ವಿವಾಹ, ಬಾಳೆಹೊನ್ನೂರು ರಂಭಾಪುರೀ ಡಾ.ವೀರಸೋಮೆಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಇಷ್ಟಲಿಂಗ ಮಹಾಪೂಜೆ, ಧರ್ಮಸಭೆಯಂತಹ ಧಾರ್ಮಿಕ ಆಚರಣೆಗಳು ನೆರವೇರಲಿವೆ.
Kshetra Samachara
13/04/2022 05:57 pm