ಕುಂದಗೋಳ : ಎತ್ತ ನೋಡಿದರತ್ತ ಜನಸಮೂಹ, ಉಧೋ ಉಧೋ ಯಲ್ಲಮ್ಮ ಉಧೋ ಉಧೋ ಯಲ್ಲಮ್ಮ ಎನ್ನುವ ಭಕ್ತರ ಧ್ವನಿ, ಮಹಾಕರಿಬಂಡಿ ಉತ್ಸವದಲ್ಲಿ ಮೆರವಣಿಗೆ ಹೊರಟ ಆದಿಶಕ್ತಿ. ಅಬ್ಬಾ ! ಚಾಕಲಬ್ಬಿಯ ಯಲ್ಲಮ್ಮದೇವಿ ಜಾತ್ರಾ ಸೊಬಗು ನೋಡಲೇರೆಡು ಕಣ್ಣು ಸಾಲದು.
ಹೌದು ! ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಅಧಿದೇವತೆ ಗುರುಗೋವಿಂದ ಭಟ್ಟರು ಹಾಗೂ ಸಂತ ಶಿಶುನಾಳ ಶರೀಫರಿಗೆ ಚಿಲುಮೆ ನೀಡಿ ಹೆಸರಾದ ತಾಯಿ ಯಲ್ಲಮ್ಮದೇವಿ ಕರಿಬಂಡಿ ಉತ್ಸವ ಸಕಲ ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು.
ಕುಂದಗೋಳ ತಾಲೂಕಿನಾದ್ಯಂತ ಭಕ್ತರು ಜಾತ್ರಾ ನಿಮಿತ್ತವಾಗಿ ಕರಿಬಂಡಿ ಸಿದ್ಧಪಡಿಸಿ ಹೊಡಿ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿದರು, ಭಕ್ತರು ತಾಯಿ ಯಲ್ಲಮ್ಮನ ಹೆಸರಲ್ಲಿ ವಿವಿಧ ಖಾದ್ಯ ಅಡುಗೆ ಮಾಡಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚುವ ಪದ್ದತಿ ಭಕ್ತಿ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾಯಿತು.
ಕರಿಬಂಡಿ ಉತ್ಸವದ ಯಲ್ಲಮ್ಮದೇವಿ ದೇವಸ್ಥಾನ ಪ್ರದಕ್ಷಿಣೆ ಹಾಕಿದ ಬಳಿಕ, ಪುರವಂತರು ಸೊರೆ ಮಾಡಿದ ಉಣಗಡಬಗಳನ್ನು ಭಕ್ತರು ಸ್ವೀಕರಿಸಿ, ಭೂಮಿಗೆ ಅರ್ಪಿಸಿ ಮಳೆ ಬೆಳೆ ವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವ ಆಚಾರ ನೆರವೇರಿತು.
Kshetra Samachara
08/04/2022 01:09 pm