ಹುಬ್ಬಳ್ಳಿ: ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ಮಠವೆಂದರೆ ಅದು ಒಂದು ಸಾಹಿತ್ಯದ ಹಾಗೂ ಸಾಂಸ್ಕೃತಿಕ ಭಂಡಾರ. ಇಲ್ಲಿ ಜಾನಪದ ಕಲೆಗೆ ಎಲ್ಲಿಲ್ಲದ ಪ್ರಾಮುಖ್ಯತೆ ಇದೆ. ಈ ನಿಟ್ಟಿನಲ್ಲಿ ಸಿದ್ಧಾರೂಢರ ಮಠದಲ್ಲಿ ಜಾನಪದ ಕಲೆಯನ್ನು ಪ್ರೋತ್ಸಾಹಿಸಲಾಗುತ್ತದೆ.
ಉತ್ತರ ಕರ್ನಾಟಕದ ಆರಾಧ್ಯ ದೈವ ಸದ್ಗುರು ಸಿದ್ಧಾರೂಢರ ಮಠದಲ್ಲಿ ದಿನದ 24 ಗಂಟೆ ಕಾಲ ತಂಬೂರಿ ಹಾಗೂ ಭಜನೆ ಸೇವೆ ನಡೆಯುತ್ತಲೇ ಇರುತ್ತದೆ. ಆದೇ ರೀತಿ ಜಾನಪದ ಸಂಗೀತ ಸಾಹಿತ್ಯದಲ್ಲಿ ಒಂದಾಗಿರುವ ಭಜನಾ ಪದಗಳನ್ನು ಆಯೋಜನೆ ಮಾಡುವ ಮೂಲಕ ಕಲಾ ಪ್ರದರ್ಶನ ಹಾಗೂ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ.
ಇನ್ನೂ ಸಿದ್ಧಾರೂಢರ ಮಠದಲ್ಲಿ ರಾಜ್ಯಮಟ್ಟದ ಸವಾಲು ಜವಾಬ್ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ನಾಡಿನ ವಿವಿಧ ಮೂಲೆಗಳಿಂದ ಭಜನಾ ಕಲಾವಿದರು ಆಗಮಿಸಿ ತಮ್ಮ ಸಾಹಿತ್ಯದ ರಸದೌತಣವನ್ನು ಜನರಿಗೆ ಉಣಬಡಿಸಿದರು.
ಒಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಿದ್ಧಾರೂಢರ ಮಠ ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು, ಭಕ್ತರು ಧಾರ್ಮಿಕ ಮೌಲ್ಯ ಆಧಾರಿತ ಭಜನಾ ಪದಗಳನ್ನು ಕೇಳಿ ಆನಂದಿಸಿದರು.
Kshetra Samachara
05/04/2022 04:27 pm