ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: 7ನೇ ದಿನದ ಮನಕವಾಡದ ಅಜ್ಜನ ಸಂಭ್ರಮ

ಅಣ್ಣಿಗೇರಿ: ಮಣಕವಾಡ ಗ್ರಾಮದಲ್ಲಿ ಆಯೋಜಿಸಿರುವ ಗ್ರಾಮದ ಶ್ರೀ ಗುರು ಅನ್ನದಾನೇಶ್ವರ ದೇವಮಂದಿರ ಮಹಾತಪಸ್ವಿ ಲಿಂ. ಮೃತ್ಯುಂಜಯ ಅಜ್ಜನ ಸಂಭ್ರಮದ 7ನೇ ದಿನದ ಕಾರ್ಯಕ್ರಮದಲ್ಲಿ ಪುರಾಣ ಮಂಗಳೋತ್ಸವ ಹಾಗೂ ಧರ್ಮ ಚಿಂತನಗೋಷ್ಠಿ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗಿದವು.

ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು ಭೋವಿ ಗುರುಪೀಠ ಚಿತ್ರದುರ್ಗ, ಶ್ರೀ ಶಿವಾನಂದ ಮಹಾಸ್ವಾಮಿಗಳು ಸಿದ್ದೇಶ್ವರ ಮಠ ಆಡಿ ಹಂದಿಗುಂದ, ಶ್ರೀ ಜಗದ್ಗುರು ಶಾಂತವೀರ ಮಹಾಸ್ವಾಮಿಗಳು ಶ್ರೀ ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಸಲೀಮ ಅಹ್ಮದ್, ಮಾಜಿ ಶಾಸಕ ಎನ್. ಹೆಚ್.ಕೋನರೆಡ್ಡಿ, ರಾಜಶೇಖರ ಮೆಣಸಿನಕಾಯಿ, ಶಿವಾನಂದ ಕರಿಗಾರ, ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಆಗಮಿಸಿದ್ದರು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು, 'ಇಷ್ಟು ಜನ ಸೇರಿರುವುದು ನೋಡಿ ತುಂಬಾ ಸಂತೋಷವಾಗುತ್ತಿದೆ. ನಾನು ಈ ಮಠದ ಭಕ್ತನಾಗಿ ಸೇವೆಸಲ್ಲಿಸಲು ಸದಾ ಸಿದ್ಧನಾಗಿದ್ದೇನೆ. ಬರುವ ದಿನಗಳಲ್ಲಿ ನನ್ನಿಂದ ಮಠಕ್ಕೆ ಏನು ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡಲು ತಯಾರಿದ್ದೇನೆ ಎಂದು ಭರವಸೆ ನೀಡಿದರು.

ಎನ್‌.ಎಚ್‌.ಕೋನರೆಡ್ಡಿ ಮಾತನಾಡಿ, ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಮಠಕ್ಕೆ ನಿಮ್ಮಿಂದ ಆಗುವ ಸಹಾಯವನ್ನು ದಯವಿಟ್ಟು ಮಾಡಿ ಎಂದು ವೇದಿಕೆಯ ಮೇಲೆ ಮನವಿ ಮಾಡಿದರು. ಕಾರ್ಯಕ್ರಮ ಇಷ್ಟು ಅಚ್ಚುಕಟ್ಟಾಗಿ ಮಾಡಿದ ಶ್ರೀಗಳಿಗೆ ಹಾಗೂ ಗ್ರಾಮದ ಸಾರ್ವಜನಿಕ ಸಾರ್ವಜನಿಕರಿಗೆ ನಮನಗಳನ್ನು ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಸುತ್ತಮುತ್ತ ಹಳ್ಳಿ, ನಗರ, ಪಟ್ಟಣ ಸೇರಿದಂತೆ ಟ್ಯಾಕ್ಟರ್, ಎತ್ತಿನ ಬಂಡಿ, ಗೂಡ್ಸ್ ವಾಹನ, ಕಾರು ಜೀಪುಗಳಲ್ಲಿ ಸಾವಿರಾರು ಜನ ಆಗಮಿಸಿದ್ದರು.ಎಲ್ಲಿ ನೋಡಿದರೂ ಜನಸಾಗರವೇ ಕಾಣುತ್ತಿತ್ತು. ಇನ್ನು ಬಂದ ಭಕ್ತರಿಗೆಲ್ಲಾ ಕಿರು ಪೂರಿಯ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಂದು ಅಜ್ಜನ ಸಂಭ್ರಮದ ಕೊನೆ ದಿನದ ಸಮಾರೋಪ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

Edited By : Shivu K
Kshetra Samachara

Kshetra Samachara

13/03/2022 12:55 pm

Cinque Terre

34.93 K

Cinque Terre

0

ಸಂಬಂಧಿತ ಸುದ್ದಿ