ಕುಂದಗೋಳ: ಕೊರೊನಾ ಮೂರನೇ ಅಲೆ ಮುಂಜಾಗ್ರತೆ ಕ್ರಮವಾಗಿ ಅದೆಷ್ಟೋ ಧಾರ್ಮಿಕ ಆಚರಣೆ ಜಾತ್ರಾ ಉತ್ಸವಗಳು ಅದ್ಧೂರಿ ಆಚರಣೆ ಮರೆತು ಸರಳ ಆಚರಣೆಗೆ ಒಳಪಟ್ಟಿವೆ.
ಅದರಂತೆ, ಪ್ರತಿವರ್ಷ ಅದ್ಧೂರಿಯಾಗಿ ನಡೆಯುತ್ತಿದ್ದ ಚಿಂಚಲಿ ಮಾಯಮ್ಮನ ಜಾತ್ರೆ ಸಹ ಕೋವಿಡ್ ಮಾರ್ಗಸೂಚಿಗೆ ಒಳಪಟ್ಟ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಜನತೆ ಚಿಂಚಲಿಗೆ ಪ್ರಯಾಣ ಬೆಳೆಸದೇ ತಮ್ಮೂರಿನ ಬೀರೇಶ್ವರ ದೇವಸ್ಥಾನದಲ್ಲಿ ಚಿಂಚಲಿ ಮಾಯಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅದ್ದೂರಿಯಾಗಿ ಭಂಡಾರದ ಹಬ್ಬ ಆಚರಿಸಿದ್ದಾರೆ.
ಡೊಳ್ಳು ಮೇಳಗಳ ನಡುವೆ ಚಿಂಚಲಿ ಮಾಯಮ್ಮನ ಉತ್ಸವ ಆಚರಿಸಿದ ದೇವನೂರು ಗ್ರಾಮದ ಭಕ್ತಾದಿಗಳು, ಜಾತ್ರೆಯ ಸವಿಯನ್ನು ತಮ್ಮೂರಲ್ಲೇ ಸೃಷ್ಟಿಸಿ ಸವಿದು, ತಮ್ಮ ತಮ್ಮ ಭಕ್ತಿಯನ್ನು ದೇವಿ ಮಾಯಮ್ಮನಿಗೆ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Kshetra Samachara
22/02/2022 09:29 pm