ಧಾರವಾಡ: ಅನಾರೋಗ್ಯದ ಕಾರಣ ಹೆಚ್ಚೂ ಕಡಿಮೆ ಕಳೆದ ಒಂದು ತಿಂಗಳಿನಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಡಿನ ಹೆಸರಾಂತ ಕವಿ ಡಾ.ಚೆನ್ನವೀರ ಕಣವಿ ಅವರ ಆರೋಗ್ಯದ ಕುರಿತು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಮಾಹಿತಿ ಪಡೆದುಕೊಂಡರು.
ಎಸ್‌ಡಿಎಂ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಕಣವಿ ಅವರನ್ನು ನೋಡಿ, ಅವರ ಆರೋಗ್ಯದ ಕುರಿತು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಡಾ.ಚೆನ್ನವೀರ ಕಣವಿ ಅವರು ನಾಡಿನ ಹೆಸರಾಂತ ಕವಿಗಳು. ಅವರು ಶೀಘ್ರ ಗುಣಮುಖರಾಗಿ ಬರಲಿ ಎಂದು ಆಶಿಸುತ್ತೇನೆ ಎಂದು ವಚನಾನಂದ ಸ್ವಾಮೀಜಿ ಇದೇ ಸಂದರ್ಭದಲ್ಲಿ ತಿಳಿಸಿದರು.
Kshetra Samachara
07/02/2022 12:11 pm