ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲಿಂಗಾಯತ ಸ್ವಾಮೀಜಿಗಳೆ ಎಲ್ಲಿದ್ದೀರಿ? ಮುತಾಲಿಕ್ ಪ್ರಶ್ನೆ

ಧಾರವಾಡ: ಲಿಂಗಾಯತ ಸಮಾಜದ ಮಹಿಳೆಯರನ್ನು ಕ್ರೈಸ್ತ ಸಮುದಾಯಕ್ಕೆ ಮತಾಂತರ ಮಾಡಲಾಗುತ್ತಿದ್ದು, ಲಿಂಗಾಯತ ಸಮಾಜದ ಸ್ವಾಮೀಜಿಗಳು, ಮಠಾಧೀಶರು ಎಲ್ಲಿದ್ದೀರಿ? ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರದ ವಿರುದ್ಧ ಮಠಾಧೀಶರು ಧ್ವನಿ ಎತ್ತಬೇಕಿದೆ. ಮಠ ಬಿಟ್ಟು ಹೊರಗಡೆ ಬನ್ನಿ. ಹಿಂದುತ್ವ ಕಾಪಾಡುವ ಕೆಲಸ ಕೇವಲ ಪ್ರಮೋದ ಮುತಾಲಿಕ್ ಕೆಲಸವಲ್ಲ. ಯಡಿಯೂರಪ್ಪನವರನ್ನು ಬಚಾವ್ ಮಾಡುವುದಷ್ಟೆ ಲಿಂಗಾಯ ಸ್ವಾಮೀಜಿಗಳ ಕೆಲಸವಲ್ಲ ಎಂದರು.

ದೇಶ ರಕ್ಷಿಸುವ ಕೆಲಸ ಮಾಡಬೇಕಿದೆ. ಇಲ್ಲದೇ ಹೋದರೆ ದೊಡ್ಡಮಟ್ಟದಲ್ಲಿ ಮತಾಂತರ ನಡೆಯುತ್ತದೆ. ಕೂಡಲೇ ಸ್ವಾಮೀಜಿಗಳು ಇದರ ವಿರುದ್ಧ ಹೋರಾಟಕ್ಕಿಳಿಯಬೇಕು ಎಂದು ಮುತಾಲಿಕ್ ಕರೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

03/12/2021 04:14 pm

Cinque Terre

33.54 K

Cinque Terre

33

ಸಂಬಂಧಿತ ಸುದ್ದಿ