ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಜಯಂತಿಯ ದಿನವೇ ಕನಕದಾಸರಿಗೆ ಗ್ರಾ.ಪಂ.ನಿಂದ ಅವಮಾನ

ಕಲಘಟಗಿ: ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕನಕದಾಸರ ಜಯಂತಿ ದಿನವೇ ಕನಕದಾಸರಿಗೆ ಅವಮಾನ ಮಾಡಿದ ಘಟನೆ ನಡೆದಿದೆ.

ಕನಕದಾಸರ ಭಾವಚಿತ್ರದ ಝರಾಕ್ಸ್ ಪ್ರತಿ ಇಟ್ಟು ಪೂಜಿಸಲಾಗಿದೆ. ಹಾಗೂ ಜಯಂತಿ ಆ‍ಚರಣೆಗೆ ಪಂಚಾಯಿತಿಯ ಸಿಬ್ಬಂದಿ ಹಾಗೂ ಸದಸ್ಯರು ಪಾಲ್ಗೊಂಡಿಲ್ಲ‌. ಕೇವಲ ವಾಟರ್ ಮ್ಯಾನ್ ಬಂದು ಜಯಂತಿ ಆಚರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಂಚಾಯಿತಿಗೆ ಬಂದ ಕೆಲ ಸದಸ್ಯರು ಕನಕದಾಸರ ಫೋಟೋ ತರಿಸಿ ಜಯಂತಿ ಆಚರಿಸಿದ್ದಾರೆ. ಈ ಮೂಲಕ ಆಗಿರುವ ಪ್ರಮಾದವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

22/11/2021 02:36 pm

Cinque Terre

23.47 K

Cinque Terre

0

ಸಂಬಂಧಿತ ಸುದ್ದಿ