ಹುಬ್ಬಳ್ಳಿ: ಅಯ್ಯಪ್ಪ ಸ್ವಾಮಿಯ ದೇಗುಲ ಅಂದರೆ ಭಕ್ತಾಧಿಗಳಲ್ಲಿ ಕೇರಳದ ಪಂಪಾನದಿಯ ತೀರದಲ್ಲಿರುವ ಶಬರಿ ಮಲೈ ಎಂಬುವಂತ ಭಾವನೆ ಇದೆ. ಆದರೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಈಗ ಶಬರಿ ಮಲೈ ನಿರ್ಮಾಣವಾಗಿದ್ದು, ಕರ್ನಾಟಕದ ಬಹುತೇಕ ಜನರಿಗೆ ಹುಬ್ಬಳ್ಳಿಯ ಶಿರೂರ ಪಾರ್ಕಿನಲ್ಲಿರುವ ದೇವಸ್ಥಾನವೇ ಶಬರಿ ಮಲೈ ಆಗಿದೆ.
ಹೌದು.. ಕಾರ್ತೀಕ ಮಾಸ ಪ್ರಾರಂಭ ಆಯ್ತು ಅಂದರೇ ಸಾಕು ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಹೋಗುವ ಕಾತುರ. ಆದರೇ ಈ ಬಾರಿ ಶಬರಿ ಮಲೈಗೆ ಹೋಗಲು ಮಾತ್ರ ಸಾಧ್ಯವಾಗುತ್ತಿಲ್ಲ. ಏಕೆಂದರೆ ಕೇವಲ 25 ಸಾವಿರ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಿದ್ದರೇ ವೃತ ಪೂರ್ಣಗೊಳಿಸಿ ಅಯ್ಯಪ್ಪನ ದರ್ಶನ ಪಡೆದುಕೊಳ್ಳಲು ಎಲ್ಲಿ ಹೋಗಬೇಕು ಎಂಬುವಂತ ಭಕ್ತರಿಗೆ ಹಾಗೂ ಮಾಲಾಧಾರಿಗಳಿಗೆ ಹುಬ್ಬಳ್ಳಿಯ ಅಯ್ಯಪ್ಪ ಸ್ವಾಮಿ ದೇಗುಲವೇ ಶಬರಿ ಮಲೈ ಆಗಿದೆ.
ಇಂದು ವಿ.ಎಸ್.ವಿ ಪ್ರಸಾದ ಅವರ ನೇತೃತ್ವದಲ್ಲಿ ಮಂಡಲ ಪೂಜೆ ಹಾಗೂ ಗಣ ಹೋಮವನ್ನು ಮಾಡಲಾಯಿತು. ಅಲ್ಲದೇ ಈಗಾಗಲೇ ದೇವಸ್ಥಾನಕ್ಕೆ ಹಾಗೂ ಹದಿನೆಂಟು ಮೆಟ್ಟಿಲುಗಳಿಗೆ ಹಿತ್ತಾಳೆ ಕವಚವನ್ನು ಕೂಡ ಜೋಡಿಸಲಾಗುತ್ತಿದೆ.
ಈ ಬಾರಿ 50 ಸಾವಿರಕ್ಕೂ ಅಧಿಕ ಜನರು ಬರುವ ಸಾಧ್ಯತೆ ಇದೆ ಎನ್ನುತ್ತಾರೆ. ಹೊಸ ವರ್ಷದ ಹೊಸಿಲಿನಲ್ಲಿರುವ ಎಲ್ಲರಿಗೂ ಅಯ್ಯಪ್ಪ ಸ್ವಾಮಿ ಆಶೀರ್ವದಿಸಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ..
Kshetra Samachara
17/11/2021 03:33 pm