ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಶಕ್ತಿದೇವಿ ಆರಾಧನೆಗೆ ಸಲಹೆ

ಅಳ್ನಾವರ: ಸಮಾಜದಲ್ಲಿ ದುಷ್ಟಶಕ್ತಿ ದಮನ ಮಾಡಲು ಶಕ್ತಿ ದೇವಿಯ ಆರಾಧನೆ ಮಾಡಬೇಕು ಎಂದು ಆಧ್ಯಾತ್ಮ ಚಿಂತಕ ಎಸ್.ಡಿ. ದೇಗಾವಿಮಠ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿ ಮಾತನಾಡಿ, ನವರಾತ್ರಿ ಉತ್ಸವ ಪ್ರಯುಕ್ತ ದೇವಿಯ ಪುರಾಣ ನಿತ್ಯ ಓದಬೇಕು. ದೇವಿ ಕಥೆಯನ್ನು ಅರ್ಥ ಮಾಡಿಕೊಂಡು ಸುಂದರ ಬದುಕು ಸಾಗಿಸಬೇಕು ಎಂದರು.

ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಎಂ.ಸಿ. ಹಿರೇಮಠ, ವೀರಭದ್ರಗೌಡ ಪಾಟೀಲ, ರಾಜು ಬೆಂಡಿಗೇರಿ, ರಾಜಶೇಖರ ಕೌಜಲಗಿ, ಜಗದೀಶ ಚಚಡಿ, ರುದ್ರಪ್ಪ ಹಂಚಿನಮನಿ, ವೈ.ವಿ. ಶಿಂಪಿ, ಉಮೇಶ ದೊಡ್ಡಮನಿ ಇದ್ದರು.

Edited By : PublicNext Desk
Kshetra Samachara

Kshetra Samachara

09/10/2021 06:49 pm

Cinque Terre

26.52 K

Cinque Terre

0

ಸಂಬಂಧಿತ ಸುದ್ದಿ